ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಎಎಲ್ ಪೈಲಟ್ ನಂದಿ ಬೆಟ್ಟದಲ್ಲಿ ಸೂಸೈಡ್

By Mahesh
|
Google Oneindia Kannada News

Baldev Singh
ಬೆಂಗಳೂರು, ಅ.11: ಹಿಂದೂಸ್ತಾನ್ ಏರೋನಾಟಿಕ್ಸ್ ಲಿ(ಎಚ್ ಎ ಎಲ್) ನ ಮುಖ್ಯ ಟೆಸ್ಟ್ ಪೈಲೆಟ್ ಹಾಗೂ ನಿರ್ದೇಶಕರಾಗಿದ್ದ ಬಲದೇವ ಸಿಂಗ್ ಅವರು ಮಂಗಳವಾರ(ಅ.11) ಬೆಳಗ್ಗೆ ನಂದಿ ಬೆಟ್ಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಕ್ವಾಡ್ರನ್ ಲೀಡರ್(ನಿವೃತ್ತ) ಆಗಿದ್ದ ಸಿಂಗ್ಗ್, ಫೈಟರ್ ಪೈಲಟ್ ಆಗಿ ಭಾರತೀಯ ವಾಯು ಸೇನೆ(IAF) ನಲ್ಲಿ ಕಾರ್ಯ ನಿರ್ವಹಿಸಿದ್ದರು.

ಪ್ರಾಥಮಿಕ ವರದಿಯ ಪ್ರಕಾರ ಮಂಗಳವಾರ ಬೆಳಗ್ಗೆ 11 ಗಂಟೆ ವೇಳೆಗೆ ಬಲದೇವ್ ಸಿಂಗ್ ಅವರು ಮೃತಪಟ್ಟಿರುವುದು ಪತ್ತೆಯಾಗಿದೆ. ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ಬೆಂಗಳೂರು ಸಮೀಪವಿರುವ ಜನಪ್ರಿಯ ವಿಹಾರತಾಣಗಳಲ್ಲಿ ಒಂದಾದ ನಂದಿ ಬೆಟ್ಟ, ಆತ್ಮಹತ್ಯೆಗಳ ತಾಣವಾಗಿ ಕೂಡಾ ಕುಖ್ಯಾತಿ ಗಳಿಸುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

English summary
Hindustan Aeronautics Limited (HAL) chief test pilot and director, Baldev Singh on Tuesday, Oct 11 committed suicide in Nandi Hills near Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X