ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ 10 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ

By Mahesh
|
Google Oneindia Kannada News

MLC Basavaraj Horatti
ಹುಬ್ಬಳ್ಳಿ, ಅ.11: ರಾಜ್ಯದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆ ಖಾಲಿ ಇದೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರ ಕೊರತೆ ಗಮನಿಸಿದರೆ ಈ ಸಂಖ್ಯೆ 13 ಸಾವಿರಕ್ಕೇರಲಿದೆ.

ಆದರೆ, ಸರ್ಕಾರ ಹುದ್ದೆಗಳನ್ನು ಭರ್ತಿ ಮಾಡದೆ ಮಾತ್ರ ಕೈಕಟ್ಟಿ ಕುಳಿತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಶಾಸಕ ರೆವೆರೆಂಡ್‌ ಫಾದರ್‌ ಜಾಕೋಬ್‌ ಅವರು ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಪಡೆದ ಮಾಹಿತಿಯಂತೆ ಪ್ರಾಥಮಿಕ ಶಾಲೆಗಳಲ್ಲಿ 6321, ಪ್ರೌಢಶಾಲೆಯಲ್ಲಿ 4006 ಶಿಕ್ಷಕರ ಹುದ್ದೆ ಖಾಲಿ ಇವೆ.

ಡಿಸೆಂಬರ್‌ ಕೊನೆ ವೇಳೆಗೆ ಪ್ರಾಥಮಿಕ ಶಾಲೆಯಲ್ಲಿ ಸುಮಾರು 8 ಸಾವಿರ ಹಾಗೂ ಪ್ರೌಢಶಾಲೆಗಳಲ್ಲಿ ಸುಮಾರು 5 ಸಾವಿರ ಹುದ್ದೆ ಖಾಲಿ ಆಗಲಿದೆ.

ಈ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ.

ಅಂಗವಿಕಲರಿಗೂ ನೌಕರಿ ಇಲ್ಲ: 2009ರಲ್ಲಿ ಅಂಗವಿಲಕರಿಗಾಗಿ ನಡೆದ ವಿಶೇಷ ನೇಮಕಾತಿ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ, ನಂತರ ಶಿಕ್ಷಕರ ಹುದ್ದೆ ಭರ್ತಿ ಪ್ರಕ್ರಿಯೆ ನಡೆದಿಲ್ಲ.

ಶಾಲೆಗಳಲ್ಲಿ ಶಿಕ್ಷಕರ ಯಾವುದೇ ಹುದ್ದೆ ಖಾಲಿ ಇರಬಾರದು. ಇದು ಶಿಕ್ಷಣ ಇಲಾಖೆ ದೋಷವೋ, ಸರ್ಕಾರದ ದೋಷವೋ ಒಟ್ಟಿನಲ್ಲಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಮುಂದುವರೆಯುತ್ತಿದೆ ಎಂದು ಹೊರಟ್ಟಿ ಹೇಳಿದ್ದಾರೆ.

English summary
MLC Basavaraj Horatti has demanded the government to fill 10,000 odd vacant teachers post in Karnataka. Government is even not filled disables quota of teacher's post according to RTI data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X