ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಎಲ್ ಸಿ ಶಂಕರಪ್ಪ ರಾಜೀನಾಮೆಗೆ ಯಡ್ಡಿ ವಿರೋಧ

By Mahesh
|
Google Oneindia Kannada News

Yeddyurappa
ಬೆಂಗಳೂರು, ಅ.10: ವಿಧಾನಮಂಡಳದ ಉಭಯ ಸದನಗಳ ಸದಸ್ಯರಲ್ಲದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ಸ್ಥಾನ ಕಲ್ಪಿಸುವ ಸಲುವಾಗಿ ತಾವು ವಿಧಾನ ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡಲು ಎನ್. ಶಂಕರಪ್ಪ ನಿರ್ಧರಿಸಿದ್ದಾರೆ. ಆದರೆ, ಇದಕ್ಕೆ ಯಡಿಯೂರಪ್ಪ ಅವರ ಬಣ ವಿರೋಧಿಸುತ್ತಿದೆ.

ಮುಖ್ಯಮಂತ್ರಿಗಳಿಗೋಸ್ಕರ ಯಾವುದೇ ತ್ಯಾಗಕ್ಕೂ ಸಿದ್ಧ. ಪಕ್ಷದ ಆದೇಶಕ್ಕೆ ಬದ್ಧಪಕ್ಷದ ವರಿಷ್ಠರು ತಮಗೆ ಸೂಕ್ತ ಸ್ಥಾನದ ಭರವಸೆ ನೀಡಿದ್ದಾರೆ ಎಂದು ಶಂಕರಪ್ಪ ಹೇಳಿದ್ದಾರೆ.

ಎರಡು ದಿನಗಳಲ್ಲಿ ರಾಯಚೂರಿನಿಂದ ಬೆಂಗಳೂರಿಗೆ ಬಂದು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶಂಕರಪ್ಪ ಹೇಳಿದ್ದಾರೆ.

ಅದರೆ, ಇದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದು, ಶಂಕರಪ್ಪ ಮಡಿವಾಳ ಸಮುದಾಯಕ್ಕೆ ಸೇರಿದ್ದು, ಅವರಿಂದ ರಾಜೀನಾಮೆ ಕೊಡಿಸಿದರೆ ಆ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಇದಕ್ಕೆ ಸಮ್ಮಿತಿಸಿದ ರಾಜ್ಯಾಧ್ಯಕ್ಷ ಕೆ.ಎಸ್ ಈಶ್ವರಪ್ಪ ಅವರು ಶಂಕರಪ್ಪ ಬದಲು ಮತ್ತೊಂದು ಹೆಸರನ್ನು ಸೂಚಿಸಿದರು. ಆದರೆ, ಈಶ್ವರಪ್ಪ ಬಾಯಿಂದ ಆ ಹೆಸರು ಹೊರ ಬರುತ್ತಿದ್ದಂತೆ ಯಡಿಯೂರಪ್ಪ ಅವರ ಮುಖ ಕಪ್ಪಿಟ್ಟಿತು.

ಶಂಕರಪ್ಪ ಇಲ್ಲದಿದ್ದರೆ ಮತ್ತೆ ಯಾರಾಗಲಿದ್ದಾರೆ ತ್ಯಾಗಜೀವಿ? ಮುಂದೆ ಓದಿ...

English summary
MLC Shankarappa is ready to quit his post to make his way to CM DV Sadananda Gowda to to enter the Legislative Council through a bypoll. But former CM BS Yeddyurappa is opposing this move, so, Bharathi Shetty may have to vacate the post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X