ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಿ ಹೆಸ್ರು ಕೇಳಿದಾಗ ಯಡ್ಡಿ ಮುಖ ನೋಡ್ಬೇಕಿತ್ತು!

By Mahesh
|
Google Oneindia Kannada News

DV Sadananda gowda
ಬೆಂಗಳೂರು, ಅ.10: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಆರು ತಿಂಗಳೊಳಗೆ ಯಾವುದಾದರೂ ಮನೆ(ಮೇಲ್ಮನೆ ಅಥವಾ ಕೆಳಮನೆ) ಸೇರಬೇಕು ಎನ್ನುತ್ತದೆ ಕಾನೂನು. ಸದಾನಂದ ಗೌಡರಿಗೆ ಇನ್ನೂ ನಾಲ್ಕು ತಿಂಗಳುಗಳ ಕಾಲ ಅವಕಾಶ ಇದೆ.

ಅದರೆ, ಸದಾನಂದ ಗೌಡರಿಗಾಗಿ ಶಾಸಕ ಸ್ಥಾನ ತ್ಯಾಗ ಮಾಡಲು ಸಿದ್ಧರಾದವರ ಪಟ್ಟಿ ಬೆಳೆಯುತ್ತಿದೆ. ಶಂಕರಪ್ಪ ಅವರ ಹೆಸರಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಾಣತನದಿಂದ ಭಾರತಿಶೆಟ್ಟಿ ಅವರ ಹೆಸರನ್ನು ಈಶ್ವರಪ್ಪ ಸಭೆಯಲ್ಲಿ ತೇಲಿ ಬಿಟ್ಟಿದ್ದಾರೆ.

ಸಚಿವೆ ಶೋಭಾ ಕರಂದ್ಲಾಜೆ ಪರಮಾಪ್ತೆ ಭಾರತಿ ಶೆಟ್ಟಿ ಅವರ ಹೆಸರು ಸೂಚಿಸಿದ ಈಶ್ವರಪ್ಪ ಅವರನ್ನು ಕೆಕ್ಕರಿಸಿ ನೋಡಿದ ಯಡಿಯೂರಪ್ಪ ಅವರು ಮೌನಕ್ಕೆ ಶರಣಾದರು ಎನ್ನಲಾಗಿದೆ.

ಇದನ್ನೇ ಸಮ್ಮತಿ ಸೂಚನೆ ಎಂದು ತಿಳಿದ ಈಶ್ವರಪ್ಪ ಅವರು ಶಂಕರಪ್ಪ ಬದಲಿಗೆ ಭಾರತಿ ಶೆಟ್ಟಿ ಅವರು ರಾಜೀನಾಮೆ ನೀಡಲಿ ಎಂದಿದ್ದಾರೆ.

ಹೇಗಿದ್ದರೂ ಅವರು ದಕ್ಷಿಣ ಕನ್ನಡ ಜಿಲ್ಲೆಯವರು. ಮುಖ್ಯಮಂತ್ರಿ ಕೂಡ ಅದೇ ಜಿಲ್ಲೆಯವರು. ಹಾಗಾಗಿ ಹೆಚ್ಚಿನ ಸಮಸ್ಯೆ ಇರುವುದಿಲ್ಲ. ಭಾರತಿ ಶೆಟ್ಟಿ ಅವರು ಮೇಲ್ಮನೆಗೆ 2008ರ ಜೂನ್‌ನಲ್ಲಿ ಆಯ್ಕೆಯಾಗಿದ್ದು, ಅಧಿಕಾರದ ಅವಧಿ ಬರುವ ಜೂನ್ 2014 ರ ಜೂನ್‌ವರೆಗೆ ಇದೆ.

ಅಕಸ್ಮಾತ್ ಭಾರತಿ ಶೆಟ್ಟಿ ತ್ಯಾಗಜೀವಿ ಪಟ್ಟದಿಂದ ಬಚಾವಾದರೆ, ಯಡಿಯೂರಪ್ಪ ಅವರ ಆಪ್ತ ಲೆಹರ್ ಸಿಂಗ್ ಸ್ಥಾನಕ್ಕೆ ಕುತ್ತು ತರಲು ಈಶ್ವರಪ್ಪ ಅವರು ಯೋಜಿಸಿದ್ದಾರೆ ಎಂದು ತಿಳಿದು ಬಂದಿದೆ.

English summary
MLC Shankarappa is ready to quit his post to make his way to CM DV Sadananda Gowda to to enter the Legislative Council through a bypoll. But former CM BS Yeddyurappa is opposing this move, so, Bharathi Shetty may have to vacate the post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X