ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗೇಶ್ವರ್ ವಜಾ ನನ್ನ ಕೆಲ್ಸವಲ್ಲ : ರಾಜ್ಯಪಾಲ

By Mahesh
|
Google Oneindia Kannada News

Minister CP Yogeshwar
ಬೆಂಗಳೂರು, ಅ.9: ಹೆಚ್ಚಿನ ಆಸ್ತಿ ಗಳಿಕೆ, ಸುಳ್ಳು ಪ್ರಮಾಣಪತ್ರ ಸಲ್ಲಿಕೆ, ಮೆಗಾಸಿಟಿ ವಂಚನೆ ಆರೋಪ ಹೊತ್ತಿರುವ ಅರಣ್ಯ ಸಚಿವ ಸಿಪಿ ಯೋಗೇಶ್ವರ್ ಅವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕುವುದು ನನ್ನ ಕೆಲಸವಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದ್ದಾರೆ.

ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ಸೂಚಿಸಿರುವುದು ನಿಜ ಆದರೆ, ಅಂತಿಮ ನಿರ್ಧಾರ ಕೈಗೊಳ್ಳುವ ಜವಾಬ್ದಾರಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹಾಗೂ ಸಂಪುಟಕ್ಕೆ ಇದೆ. ಅದು ಅವರ ಕೆಲಸ ಎಂದು ರಾಜ್ಯಪಾಲರು ಹೇಳಿದ್ದಾರೆ.

ಶನಿವಾರದಂದು ರಾಜಭವನಕ್ಕೆ ತೆರಳಿ ತಮ್ಮ ದುಃಖ ತೋಡಿಕೊಳ್ಳಲು ಬಯಸಿದ್ದ ಸಚಿವ ಯೋಗೇಶ್ವರ್ ಅವರನ್ನು ಮಾತು ಕೂಡಾ ಆಡಿಸಿದರೆ ರಾಜ್ಯಪಾಲರು ಬೇರೆ ಕಡೆ ತೆರಳಿದ್ದಾರೆ.

ಸಚಿವ ಯೋಗೇಶ್ವರ್ ಅವರ ಮೇಲೆ ಎರಡು ರಾಜಕೀಯ ಪಕ್ಷಗಳಿಂದ ದೂರುಗಳು ಬಂದಿರುವುದು ನಿಜ, ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಮುಂದಿನ ಕ್ರಮ ಕೈಗೊಳ್ಳುವುದು ಸರ್ಕಾರದ ನಿರ್ಧಾರಕ್ಕೆ ಬಿಟ್ಟದ್ದು ಎಂದು ರಾಜ್ಯಪಾಲರು ಹೇಳಿದರು.

ಹದಗೆಟ್ಟು ಹೋಗಿರುವ ಸಮಾಜವನ್ನು ಸಂಪೂರ್ಣ ಶುದ್ಧಿ ಮಾಡಲು ನಾನೇನು ಬಸವಣ್ಣ ಅಲ್ಲ ಎಂದು ರಾಜ್ಯಪಾಲರು ನಗೆಯಾಡಿದರು,

English summary
Governor Hans Raj Bhardwaj on Saturday said he refused to meet Forest Minister CP Yogeshwar and later said sacking Yogeshwar from minister post is not my duty, CM Sadananda Gowda and cabinet has to take decision on it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X