ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಅಕ್ರಮ ಸಾಬೀತು: ಲೋಕಾಯುಕ್ತ ಪೊಲೀಸ್

By Srinath
|
Google Oneindia Kannada News

yeddyurappa-denotification-illegal-lokayukta-police
ಬೆಂಗಳೂರು, ಅ.5: ಕಷ್ಟಗಳು ಬಂದರೆ ಒಟ್ಟೊಟ್ಟಿಗೆ ಬರುತ್ತವಂತೆ. ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣ ವಿಚಾರಣೆಗೆ ಹೈಕೋರ್ಟಿನಿಂದ ತಡೆಯಾಜ್ಞೆ ತಂದುಕೊಳ್ಳುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದರಾದರೂ ಅದು ಹೆಚ್ಚು ಕಾಲ ಬರಕತ್ತಾಗಿಲ್ಲ. ಲೋಕಾಯುಕ್ತ ಕೋರ್ಟ್ ಮತ್ತು ಲೋಕಾಯುಕ್ತ ಪೊಲೀಸರು ಒಂದೇ ಸಮನೆ ಯಡಿಯೂರಪ್ಪ ಮೇಲೆ ಮುರುಕೊಂಡು ಬಿದ್ದಂತಿದೆ.

ಯಡಿಯೂರಪ್ಪ ಅಕ್ರಮಗಳ ವಿಚಾರಣೆಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಹಸಿರು ನಿಶಾನೆ ತೋರಿಸಿದ್ದರೆ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ ಅಕ್ರಮಗಳನ್ನು ಸಾಬೀತುಪಡಿಸುವಷ್ಟು ಸಾಕ್ಷ್ಯಗಳನ್ನು ತಾನು ಕಲೆ ಹಾಕಿರುವುದಾಗಿ ತಿಳಿಸಿದೆ.

ಪ್ರಕರಣವೇನು?: ಯಡಿಯೂರಪ್ಪ ತಮ್ಮ ಅಧಿಕಾರಾವಧಿಯಲ್ಲಿ ತಮ್ಮ ಆಪ್ತ ಹಾಗೂ ಸಂಬಂಧಿಕರಿಗೆ ಸರಕಾರಿ ಭೂಮಿಯನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಆರೋಪಿ ಸಿರಾಜಿನ್ ಬಾಷಾ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಎರಡನೆ ಹಾಗೂ ಮೂರನೆ ಖಾಸಗಿ ದೂರನ್ನು ದಾಖಲಿಸಿದ್ದರು. ಬಾಷಾರ ಪ್ರಮಾಣೀಕೃತ ಹೇಳಿಕೆ ಪಡೆದಿದ್ದ ವಿಶೇಷ ನ್ಯಾಯಾಲಯ ಆ. 8ರಂದು ಯಡಿಯೂರಪ್ಪರಿಗೆ ಸಮನ್ಸ್ ಜಾರಿ ಮಾಡಿತ್ತು.

ಅಲ್ಲದೆ, ಬಿಎಸ್‌ವೈ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪುನ್ನು ಕಾಯ್ದಿರಿಸಿತ್ತು. ಬಂಧನದ ಭೀತಿಯಿಂದಾಗಿ ಯಡಿಯೂರಪ್ಪ ಎರಡೂ ದೂರುಗಳ ಸಂಬಂಧ ಅಧೀನ ನ್ಯಾಯಾಲಯ ವಿಚಾರಣೆಗೆ ತಡೆಯಾಜ್ಞೆ ನೀಡುವಂತೆ ಕೋರಿದ್ದರು. ಇದನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಮಾನ್ಯ ಮಾಡಿತ್ತು.

English summary
On Tuesday (Oct 4), the Karnataka Lokayukta police have said that the charges relating to corruption against the former Karnataka chief minister B. S. Yeddyurappa is provable in court. They have gathered enough material to nail BSY in illegal denotification case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X