ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಲ್ ಕರ್ನಾಟಕ ಟಿಪ್ಪರ್ ಕಳ್ಳರ ಬಂಧನ

By Chidambar Baikampady
|
Google Oneindia Kannada News

Tipper thieves arrested in Mangalore
ಮಂಗಳೂರು, ಅ.5 : ನೀವು ಮನೆ ಕಳ್ಳತನ, ದೇವಸ್ಥಾನದ ಲೂಟಿ, ಸರಗಳ್ಳರು, ಬೈಕ್ ಕಳ್ಳರು ಹೀಗೆ ಬಗೆಬಗೆಯ ಕಳ್ಳರನ್ನು ಕೇಳಿದ್ದೀರಿ. ಈ ಕಳ್ಳರ ಸರಣಿಗೆ ಟಿಪ್ಪರ್ ಕಳ್ಳರನ್ನೂ ಸೇರಿಸಿಕೊಳ್ಳಿ. ಇದೇನಪ್ಪ ಅಂತೀರಾ? ಹಾಗಾದರೆ ಇಲ್ಲಿದೆ ನೋಡಿ ಖದೀಮರ ಕಾರುಬಾರು.

ರಾಜ್ಯಾದ್ಯಂತ ಟಿಪ್ಪರ್ ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಖದೀಮರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಟಿಪ್ಪರ್ ಕಳವು ಮಾಡುತ್ತಿದ್ದವರು ಎಣ್ಣೆಹೊಳೆಯ ಇಕ್ಬಾಲ್‌ (40) ಮತ್ತು ಗಂಜಿಮಠದ ಇಡ್ಕಾ ಇಬ್ರಾಹಿಂ (29). ಇವರನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ.

ಕಳೆದ 2 ವರ್ಷಗಳಿಂದ ಇವರು ರಾಜ್ಯದ ಹಲವೆಡೆ ಟಿಪ್ಪರ್ ಗಳನ್ನು ಕಳವು ಮಾಡಿ ನಕಲಿ ಆರ್ .ಸಿ.ಯೊಂದಿಗೆ ಮಾರಾಟ ಮಾಡುತ್ತಿದ್ದು, ಕೆಲವು ಸಂದರ್ಭದಲ್ಲಿ ಇನ್ಶೂರೆನ್ಸ್‌ ಹಣ ವಾಪಸ್ ಪಡೆಯಲು ಟಿಪ್ಪರ್ ಕಳವಾದ ಬಗ್ಗೆ ಸುಳ್ಳು ದೂರನ್ನೂ ನೀಡುತ್ತಿದ್ದರು ಎನ್ನಲಾಗಿದೆ.

ತುಮಕೂರು, ಬಳ್ಳಾರಿ, ಮೈಸೂರು ಮುಂತಾದ ಕಡೆಯಲ್ಲಿ ಇವರು ನಕಲಿ ಆರ್ ಸಿ ಸೃಷ್ಟಿ ಮಾಡುತ್ತಿದ್ದರು. ಅದಕ್ಕೆ ಪೂರಕವಾಗಿ ವಾಹನದ ಇಂಜಿನ್‌ ಹಾಗೂ ಚಾಸಿಸ್‌ ನಂಬರನ್ನೂ ಹೊಸದಾಗಿ ಪಂಚ್‌ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅಲ್ಲಿನ ಸಾರಿಗೆ ಇಲಾಖೆ ಅಧಿಕಾರಿಗಳೂ ಈ ಜಾಲದಲ್ಲಿ ಶಾಮೀಲಾಗಿರುವ ಶಂಕೆ ಇದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಡೂರಿನ ಹಬೀಬ್‌, ಕಾರ್ಕಳದ ಸತೀಶ್‌, ಮೂಡಬಿದಿರೆಯ ಭಾಸ್ಕರ ಮತ್ತು ಹರೀಶ್‌ ತಲೆಮರೆಸಿಕೊಂಡಿದ್ದಾರೆ. ಇನ್ನೂ ಹಲವು ಆರೋಪಿಗಳು ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಶಂಕಿಸಲಾಗಿದ್ದು, ಇನ್ನೂ ಕನಿಷ್ಠ 20 ಟಿಪ್ಪರ್ ಗಳು ಇದೇ ರೀತಿಯಲ್ಲಿ ಕಳವಾಗಿರುವ ಸಾಧ್ಯತೆಯಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

English summary
Karkala police have arrested two tipper thieves. The thieves used to steal tippers all over Karnataka and would change the RC book and chassis to sell them to other people. It is believed that there are many people in this gang.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X