ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರೀಸ್ ಗೆ ಆರ್ಥಿಕ ಬಿಕ್ಕಟ್ಟಿನ ಮೊದಲ ಹೊಡೆತ

By Mahesh
|
Google Oneindia Kannada News

Greece Recession
ಅಥೆನ್ಸ್‌, ಅ.4: ಜಾಗತಿಕ ಆರ್ಥಿಕ ಕುಸಿತದ ಭೀತಿಯಲ್ಲಿರುವ ಗ್ರೀಸ್ ದೇಶ ತನ್ನ ಸಾರ್ವಜನಿಕ ರಂಗದ 28,000 ನೌಕರರನ್ನು 2011ರ ಅಂತ್ಯದೊಳಗೆ ಕಡಿಮೆ ವೇತನ ನೀಡಿ ಅಮಾನತಿನಲ್ಲಿಡಲು ನಿರ್ಧರಿಸಿದೆ.

ಮೊದಲಿಗೆ 30,000 ನೌಕರರನ್ನು ಅಮಾನತಿನಲ್ಲಿಡುವ ಯೋಜನೆ ಇತ್ತು. ಆದರೆ ಅವರು ಖಾಸಗಿ ರಂಗದಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಬಹುದಾಗಿದೆ.

ಮುಂದಿನ ನಾಲ್ಕು ವರ್ಷಗಳಲ್ಲಿ ಪೌರ ಸೇವಾ ಉದ್ಯೋಗಗಳನ್ನು 1.50 ಲಕ್ಷದಷ್ಟು ಕಡಿತಗೊಳಿಸಲು ಸಂಪುಟ ನಿರ್ಧರಿಸಿದೆ.

ಯುರೋ ಯೂನಿಯನ್ ಹಾಗೂ IMF ಜೊತೆ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಗ್ರೀಸ್ ಸರ್ಕಾರ ಹೇಳಿದೆ.

ಅರ್ಥಿಕ ಸುಧಾರಣೆಗೆ ಗ್ರೀಸ್ ಅನುಸರಿಸಿದ ತಂತ್ರವನ್ನು ಯುರೋ ಯೂನಿಯನ್ ನ 17 ದೇಶಗಳಲ್ಲೂ ಅಳವಡಿಸಿಕೊಳ್ಳುವ ಚಿಂತನೆ ನಡೆದಿದೆ.

ನಿಧಾನವಾಗಿ ಭಾರತ ಸೇರಿದಂತೆ ಪೂರ್ವ ಏಷ್ಯಾ ರಾಷ್ಟ್ರಗಳಿಗೆ ಆರ್ಥಿಕ ಬಿಕ್ಕಟ್ಟಿನ ಬಿಸಿ ತಗುಲುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary
Greece government decided to axe 30,000 public servants after consulting European Union (EU) and IMF auditors. Public servants temporarily will be in a labour reserve. But it is against Greece constitution
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X