ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿಗೆ ವಾಸ್ತು ದೋಷ, ವರ್ಷಕ್ಕೊಬ್ಬ ಸದಸ್ಯ ಬಲಿ

By Mahesh
|
Google Oneindia Kannada News

BBMP suffers Vastu problem
ಬೆಂಗಳೂರು, ಅ.3: ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅಸ್ತಿತ್ವಕ್ಕೆ ಬಂದ ಮೇಲೆ ಇಬ್ಬರು ಸದಸ್ಯರು ಕೊಲೆಯಾಗಿದ್ದಾರೆ. ಇದಕ್ಕೆ ಬಿಬಿಎಂಪಿ ಕಟ್ಟಡದ ವಾಸ್ತುದೋಷ ಕಾರಣವೇ, ಪಿಶಾಚಿ ಕಾಟವೇ ಎಂಬ ಗಾಳಿಸುದ್ದಿ ಹಬ್ಬುತ್ತಿದೆ.

ಕೌನ್ಸಿಲ್ ಕಟ್ಟಡದ ವಾಸ್ತುದೋಷ ಸರಿಯಾಗಿಲ್ಲ. ಇದರಿಂದ ಮುಂದೆ ಸಾವುನೋವುಗಳು ಸಂಭವಿಸುತ್ತದೆ ಎಂದು ಖ್ಯಾತ ಜ್ಯೋತಿಷಿ ಮುರಳಿ ಎಂಬುವವರು 1996ರಲ್ಲೇ ಎಚ್ಚರಿಸಿ ಭವಿಷ್ಯ ನುಡಿದಿದ್ದರು.

ಅವರ ಭವಿಷ್ಯ ವಾಣಿಗೆ ಪುಷ್ಟಿ ನೀಡುವಂತೆ ಪಾಲಿಕೆ ಸದಸ್ಯರಾದ ವೆಂಕಟಾಚಲ, ಬಿ ಶೈಲ ಎಂಬುವರ ಹತ್ಯೆ ನಡೆದಿತ್ತು. ಬಿಬಿಎಂಪಿ ಅಸ್ತಿತ್ವಕ್ಕೆ ಬಂದ ಮೇಲೆ ಜೆಡಿಎಸ್ ನ ಸದಸ್ಯ ದಿವಾನ್ ಅಲಿ ಹಾಗೂ ಕಾಂಗ್ರೆಸ್ ಸದಸ್ಯ ನಟರಾಜ್ ಅವರ ಹತ್ಯೆಯಾಗಿದೆ.

ಬಿಬಿಎಂಪಿ ಸದಸ್ಯರಿಗೆ ಭಯ ಹುಟ್ಟಿಸಿರುವ ಕೆಲ ಜ್ಯೋತಿಷಿಗಳು ಪೂಜೆ ಪುನಸ್ಕಾರ, ಹೋಮ ಹವನ ಮಾಡಿಸುತ್ತಿದ್ದಾರೆ. ವರ್ಷಕ್ಕೊಬ್ಬರಂತೆ ಇಬ್ಬರು ಬಿಬಿಎಂಪಿ ಸದಸ್ಯರ ಹತ್ಯೆಯಾಗಿದೆ. ಮುಂದಿನ ಬಲಿ ಯಾರಾಗಬಹುದು ಎಂಬ ಆತಂಕ ಎಲ್ಲಾ ಸದಸ್ಯರಲ್ಲೂ ಮನೆ ಮಾಡಿದೆ.

ಮೊದಲು ವಾಸ್ತು ಸರಿಪಡಿಸಿ, ಜೀವ ಉಳಿಸಿ ಎಂದು ಮೇಯರ್ ಶಾರದಮ್ಮ ಅವರನ್ನು ಕೆಲ ಸದಸ್ಯರು ಕೇಳಿಕೊಂಡಿದ್ದಾರಂತೆ. ಮುಂದೇನಾಗುವುದೋ ಕಾದು ನೋಡೋಣ.

English summary
BBMP building his having Vastu problem, members specially from opposition party faced many bad omen, some say it is ghost play. After murder of Nataraj and Diwan Ali murder all are remembering Jyotishi Murali's warning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X