ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಾದ್ಯಂತ ಸೌಂದರ್ಯಲಹರೀ ಪಾರಾಯಣ

By Shami
|
Google Oneindia Kannada News

Saint Adi Shankaracharya
ತುಮಕೂರು, ಅ. 3 : ಶ್ರೀ ಶಂಕರ ಭಗವತ್ಪಾದರ ಕೃತಿಗಳ ಅಧ್ಯಯನ ಹಾಗೂ ನಿರಂತರ ಪಾರಾಯಣ ಉದ್ದೇಶದ ವೇದಾಂತ ಭಾರತೀ ಸಂಸ್ಥೆಯು ಮೈಸೂರು ಜಿಲ್ಲೆ ಕೃಷ್ಣರಾಜನಗರದ ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧಿಪತಿಗಳಾದ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಶ್ರೀ ಶಾಂಕರ ಸ್ತ್ರೋತ್ರ ಪಾರಾಯಣ ಸತ್ರ ಕಾರ್ಯಕ್ರಮವನ್ನು ರಾಜ್ಯಮಟ್ಟದಲ್ಲಿ ಆಯೋಜಿಸಿದೆ, ಅಕ್ಟೋಬರ್ 4 ಮಂಗಳವಾರ ದುರ್ಗಾಷ್ಟಮಿಯ ಶುಭ ಸಂದರ್ಭದಲ್ಲಿ ಇದು ಚಾಲನೆಗೊಳ್ಳಲಿದೆ.

ಕರ್ನಾಟಕ ರಾಜ್ಯಾದ್ಯಂತ ಏಕಕಾಲಕ್ಕೆ ಸಾಮೂಹಿಕವಾಗಿ ನಿರಂತರವಾಗಿ ಪ್ರತಿ ಮಂಗಳವಾರ ಸಂಜೆ 6 ಗಂಟೆಗೆ ಸರಿಯಾಗಿ ಸೌಂದರ್ಯ ಲಹರೀ ಪಾರಾಯಣ ಕಾರ್ಯಕ್ರಮವನ್ನು ರೂಪಿಸಿದ್ದು, ಜೊತೆಗೆ ಶಿವಾನಂದ ಲಹರಿ, ದಶಶ್ಲೋಕೀ, ಗುರ್ವಷ್ಟಕ, ನಿರ್ವಾಣ ಷಟ್ಕ ಹಾಗೂ ಶಾಂಕರ ಸ್ತವ ಮಾಲಾದಲ್ಲಿರುವ ಇನ್ನಿತರ ಶ್ಲೋಕಗಳ ಪಾರಾಯಣವೂ ನಡೆಯಲಿದೆ.

ತುಮಕೂರು ನಗರ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲೂ ಪಾರಾಯಣ ವ್ಯವಸ್ಥೆ ಮಾಡಲಾಗಿದೆ. ಸರ್ವ ಸಮಾಜದ ಸಮಸ್ತ ನಾಗರಿಕರು, ತಾಯಂದಿರು, ಮಹನೀಯರು, ವಿದ್ಯಾರ್ಥಿಗಳು, ವಿವಿಧ ಸಂಘ ಹಾಗೂ ಶಿಕ್ಷಣ ಸಂಸ್ಥೆಗಳು, ಮಹಿಳಾ ಮಂಡಳಿಗಳು ಪ್ರತಿ ಮಂಗಳವಾರ ಸಂಜೆ 6 ಗಂಟೆಯಿಂದ ತಮ್ಮ ಬಡಾವಣೆಗಳಲ್ಲಿ, ದೇವಾಲಯಗಳಲ್ಲಿ, ಮನೆಗಳಲ್ಲಿ ಸಮಾವೇಶಗೊಂಡು ಸ್ತ್ರೋತ್ರ ಪಾರಾಯಣ ಸತ್ರದಲ್ಲಿ ಭಾಗವಹಿಸಲಿದ್ದಾರೆಂದು ವೇದಾಂತ ಭಾರತೀ ನಗರ ಸಂಚಾಲಕ ನಾ. ವೆಂಕಟೇಶ ಜೋಯಿಸ್ ತಿಳಿಸಿದ್ದಾರೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ನಾ. ವೆಂಕಟೇಶ ಜೋಯಿಸ್, (ಮೊಬೈಲ್: 98452 30487, 96111 55224) ಶ್ರೀಗಿರಿ ನಿಲಯ, 5 ನೇ ಮುಖ್ಯರಸ್ತೆ, ಶಿವಮೂಕಾಂಬಿಕ ನಗರ, ಉಪ್ಪಾರಹಳ್ಳಿ ರಸ್ತೆ, ತುಮಕೂರು ಅವರನ್ನು ಸಂಪರ್ಕಿಸಲು ಕೋರಲಾಗಿದೆ.

English summary
Jagadguru Sri Adi Sankaracharya was the greatest exponent of the doctrine of Advaita Vedanta and a savior of Vedic Dharma. On the occasion of Durgashtami (2011) Community singing and recitation of his works is organized across Karnataka under the guidance of Yedatore Seer, Krishnarajanagara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X