ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳ್ಳ ಪೂಜಾರಿಯ ಹಿಡಿದ ಜಾಣ ಪೊಲೀಸರು

By Mahesh
|
Google Oneindia Kannada News

Channarayapatna temple robbery
ಚನ್ನರಾಯಪಟ್ಟಣ, ಅ.2: ಭಕ್ತಾದಿಗಳು ಕಾಣಿಕೆ ನೀಡಿದ ಒಡವೆಗಳನ್ನು ದೇವಾಲಯದಲ್ಲಿ ಕಳವು ಮಾಡಿ, ಬೇರೆ ಯಾರೋ ಕದ್ದಿದ್ದಾರೆ ಎಂದು ಕಥೆ ಕಟ್ಟಿದ್ದ ಅರ್ಚಕನೊಬ್ಬನನ್ನು ತಾಲೂಕಿನ ಪೊಲೀಸರು ಉಪಾಯವಾಗಿ ಬಂಧಿಸಿದ್ದಾರೆ.

ಗುಲಸಿಂದ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಅರ್ಚಕ ಜಗದೀಶ್ ಎಂಬುವನೇ ಬಂಧಿತ ಆರೋಪಿ. ಈತ ಭಕ್ತಾದಿಗಳು ದೇವರಿಗೆ ನೀಡಿದ ಕಾಣಿಕೆ ಒಡವೆಗಳನ್ನು ಕಳವು ಮಾಡಿ ಬೇರೆಯವರು ಕಳವು ಮಾಡಿದ್ದಾರೆ ಎಂದು ನಂಬಿಸಲು ಹೋಗಿ ಆತನೇ ಸಿಕ್ಕಿ ಬಿದ್ದಿದ್ದಾನೆ.

ಆರೋಪಿ ಜಗದೀಶ್ ಶುಕ್ರವಾರ ರಾತ್ರಿ 12 ಗಂಟೆ ಸಮಯದಲ್ಲಿ ದೇವಸ್ಥಾನದ ಬಾಗಿಲು ತೆರೆದು ದೇವರಿಗೆ ಹಾಕಿದ್ದ 83 ಗ್ರಾಂ ಒಡವೆಗಳನ್ನು ಕಳವು ಮಾಡಿ ತನ್ನ ಮನೆಯಲ್ಲಿಟ್ಟು, ಆತನೇ ಮಧ್ಯರಾತ್ರಿ ಒಂದು ಗಂಟೆ ಸಮಯದಲ್ಲಿ ಕಳ್ಳರು ದೇವಸ್ಥಾನ ನುಗ್ಗಿ ಚಿನ್ನದ ಒಡವೆಗಳನ್ನು ಕಳವು ಮಾಡಿದ್ದಾರೆ ಎಂದು ಗ್ರಾಮಸ್ಥರಿಗೆ ನಂಬಿಸಲು ಯತ್ನಿಸಿದ್ದಾನೆ.

ಈ ಬಗ್ಗೆ ಗ್ರಾಮಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಕ್ಷಣ ಕಾರ್ಯಾಚರಣೆ ಕೈಗೊಂಡ ಪೊಲೀಸರು ಶ್ವಾನದೊಂದಿಗೆ ಆಗಮಿಸಿದ ಸಂದರ್ಭದಲ್ಲಿ ಶ್ವಾನವು ದೇವಸ್ಥಾನದಿಂದ ನೇರವಾಗಿ ಅರ್ಚಕನ ಮನೆಗೆ ಹೋಗಿದೆ. ಆನಂತರ ಪೊಲೀಸರು ಅರ್ಚಕ ಜಗದೀಶನನ್ನು ವಿಚಾರಣೆ ನಡೆಸಿದಾಗ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಸರ್ಕಲ್ ಇನ್‌ಸ್ಪೆಕ್ಟರ್ ಎ.ಮಾರಪ್ಪ ಹಾಗೂ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿದ್ದು, ಪಟ್ಟಣ ಪೋಲಿಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

English summary
Temple priest(Poojari)of Gulasinda village held. He allegedly stolen Ranganatha Swamy temple treasure and pretended that robbers stolen all the money from temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X