ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಪ್ಪಲಿ ಸೇವೆ: ಸೋಮಣ್ಣ, ಅಶೋಕಣ್ಣ ಏನಣ್ಣಾ ಇದೆಲ್ಲ?

By Srinath
|
Google Oneindia Kannada News

man-hurls-sandal-at-somanna-vidhana-soudha
ಬೆಂಗಳೂರು, ಅ.02: ಸಚಿವ ಸೋಮಣ್ಣ ಮೇಲೆ ಚಪ್ಪಲಿಯಿಂದ ಬಿಜೆಪಿ ಕಾರ್ಯಕರ್ತನೊಬ್ಬ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪಕ್ಷದಲ್ಲಿನ ಹುಳುಕು ಬಯಲಿಗೆ ಬಂದಿದೆ. ಬೆಂಗಳೂರು ನಗರವನ್ನು ಪ್ರತಿನಿಧಿಸುವ ಅತಿರಥ ಮಹಾರಥರೆಂದೇ ಬಿಂಬಿತರಾಗಿರುವ ಸೋಮಣ್ಣ ಹಾಗೂ ಅಶೋಕ್‌ ನಡುವಣ ಮುಸುಕಿನ ಗುದ್ದಾಟ ಜಗತ್ತಿಗೆ ಸ್ಪಷ್ಟವಾಗಿ ಕಾಣಿಸುತ್ತಿದೆ.

ಹೇಳಿಕೇಳಿ ಸೋಮಣ್ಣ ಯಡಿಯೂರಪ್ಪ ಬಣದೊಂದಿಗೆ ಹೆಚ್ಚಾಗಿ ಗುರುತಿಸಿಕೊಂಡವರು. ಇದೇ ವೇಳೆ, ಅಶೋಕ್ ಅವರು ಯಡಿಯೂರಪ್ಪ ಅವರಿಂದ ದೂರವಾಗಿ ಯಾವುದೋ ಕಾಲವಾಗಿದೆ.

ಇಂತಹ ಸಂದರ್ಭದಲ್ಲಿ ಗೃಹಸಚಿವರಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಶೋಕ್, ವಿವೇಚನೆ ಕಳೆದುಕೊಂಡು 'ವಸತಿ ಸಚಿವ ವಿ. ಸೋಮಣ್ಣ ಅವರ ಮೇಲೆ ಚಪ್ಪಲಿ ಎಸೆದು ಹಲ್ಲೆ ನಡೆಸಿರುವ ಆರೋಪಿ ಬಿ.ಎಸ್. ಪ್ರಸಾದ್ (35) ವೀರಶೈವ ಜನಾಂಗಕ್ಕೆ ಸೇರಿದವನೆಂದೂ, ಆತನ ಬಳಿ ಮಾಜಿ ಸಿಎಂ ಯಡಿಯೂರಪ್ಪ ಭಾವಚಿತ್ರ ಇರುವ ವಿಸಿಟಿಂಗ್ ಕಾರ್ಡ್ ಪತ್ತೆಯಾಗಿದೆ ಎಂಬ ಹೇಳಿಕೆ ನೀಡಿ ರಾಡಿ ಎಬ್ಬಿಸಿದ್ದಾರೆ.

English summary
A BJP worker B S Prasad (35) hurled a sandal at Housing Minister V Somanna in the corridors of third floor of Vidhana Soudha in Bangalore on Saturday (Oct 1). After the incident political Indifference within BJP has surfaced once again. Its apparently a war between Ministers Somanna and R Ashoka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X