ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶೋಕ್ ಬಾಯಿಂದ ಚಪ್ಪಲಿ ಸೇವಾಕರ್ತನ ಪ್ರವರ

By Srinath
|
Google Oneindia Kannada News

B S Prasad who hurled sandal at Minister Somanna
ಬೆಂಗಳೂರು, ಅ.02: ಸನ್ಮಾನ್ಯ ಅಶೋಕ್‌ ಹೇಳಿಕೆ ಹೀಗಿದೆ: ಹಲ್ಲೆ ನಡೆಸಿದಾಗ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲುವಿನವನು, ಬಿಇ ಪದವೀಧರನಾಗಿದ್ದು, ಸಿವಿಲ್‌ ಗುತ್ತಿಗೆದಾರನಾಗಿದ್ದಾನೆ. ಆತ ವೀರಶೈವ ಕೋಮಿಗೆ ಸೇರಿದ್ದಾನೆ. ಆತನ ತಂದೆ ಬಸವರಾಜು ನಿವೃತ್ತ ಗ್ರಾಮ ಲೆಕ್ಕಾಧಿಕಾರಿಯಾಗಿದ್ದಾರೆ.

ಚನ್ನಪಟ್ಟಣ ಉಪ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದ ಎಂಬ ಮಾಹಿತಿ ಇದೆ. ಕಳೆದ ಗೋವಿಂದರಾಜನಗರ ಉಪ ಚುನಾವಣೆಯಲ್ಲಿ ಸೋಮಣ್ಣರ ಪರವಾಗಿ ಪ್ರಚಾರ ಮಾಡಿದ್ದಾಗಿ ಆತ ಹೇಳಿದ್ದಾನೆ.

ಆತ ವಿಧಾನಸೌಧ ಪ್ರವೇಶಕ್ಕೆ ಬಿಜೆಪಿ ಕಚೇರಿಯಿಂದಲೇ ಪಾಸ್‌ ಪಡೆದಿದ್ದಾನೆ. ಮುಖ್ಯಮಂತ್ರಿ ಕಚೇರಿಗೆ ಬರಬೇಕಾಗಿದೆ ಎಂದು ಗೇಟ್‌ನಲ್ಲಿ ನಮೂದಿಸಿದ್ದಾನೆ. ಆತನ ಬಳಿಯಲ್ಲಿ ಯಾವುದೇ ಆಯುಧವೂ ಇರಲಿಲ್ಲ. ಆತ ಕುಡಿದಿರಲಿಲ್ಲ. ಆತನ ವಿಸಿಟಿಂಗ್‌ ಕಾರ್ಡಿನ ಹಿಂದೆ ಯಾರಿಗೋ ಶಿಫಾರಸು ಪತ್ರ ಬರೆದುಕೊಟ್ಟಿದ್ದಾನೆ.

ಸೋಮಣ್ಣರನ್ನು ಹಲವು ಬಾರಿ ಭೇಟಿ ಮಾಡಿ ನಿಗಮ, ಮಂಡಳಿಗಳಿಗೆ ನೇಮಕ ಮಾಡುವಂತೆ ಮನವಿ ಮಾಡಿರುವುದಾಗಿ ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದಾನೆ. ಆತನ ವಿರುದ್ಧ ಐಪಿಸಿ 341, 323, 504 ಮತ್ತು 506ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೋಮಣ್ಣ ನನ್ನ ಒಳ್ಳೆಯ ಸ್ನೇಹಿತರು, ಈ ಘಟನೆ ಖಂಡಿಸುತ್ತೇನೆ.

English summary
A BJP worker B S Prasad (35) hurled a sandal at Housing Minister V Somanna in the corridors of third floor of Vidhana Soudha in Bangalore on Saturday (Oct 1). After the incident its apparently a war between Ministers Somanna and R Ashoka. Ashoka infuriates Somanna. At the same time Ashoka gives details of sandal server.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X