ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್ ಮೇಲೆ 4.75ಲಕ್ಷ ತೆರಿಗೆ ಗೂಗ್ಲಿ

By Mahesh
|
Google Oneindia Kannada News

BMC impose fine on Sachin
ಮುಂಬೈ, ಸೆ,30: ಹೊಸ ಬಂಗಲೆ ಪ್ರವೇಶಿಸಿ ಸಂಭ್ರಮಾಚರಣೆಯಲ್ಲಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮೇಲೆ ಮುಂಬೈ ನಗರ ಪಾಲಿಕೆ 4.75 ಲಕ್ಷ ರೂ ತೆರಿಗೆ ಬೌನ್ಸರ್ ಹಾಕಿದೆ.

ಸುಮಾರು 79 ಕೋಟಿ ಬೆಲೆ ಬಾಳುವ ಬಂಗಲೆ ಸಚಿನ್ ಅವರ ಎರಡನೇ ಅತಿದೊಡ್ಡ ಕನಸು ಎಂದೇ ಹೇಳಲಾಗುತ್ತದೆ. ಆದರೆ, ಬಾಂದ್ರಾ ಪ್ರದೇಶದಲ್ಲಿರುವ ಈ ಬಂಗಲೆಯಲ್ಲಿ ವಾಸಿಸಲು ಬೇಕಾದ ವಸತಿಯೋಗ್ಯ ಪ್ರಮಾಣಪತ್ರ (Occupancy Certificate)ವನ್ನು ಸಚಿನ್ ಪಡೆದಿರಲಿಲ್ಲ.

ಈ ಬಗ್ಗೆ ಮಾಧ್ಯಮಗಳು ದಪ್ಪಕ್ಷರಗಳಲ್ಲಿ ವರದಿ ಪ್ರಕಟಿಸಿದ ಮೇಲೆ ಎಚ್ಚೆತ್ತುಕೊಂಡ ಬಿಎಂಸಿ, ಸಚಿನ್ ಅವರು ಓಸಿ ಪಡೆಯುವ ಮುನ್ನ 4.75ಲಕ್ಷ ರೂ ದಂಡ ಕಟ್ಟಬೇಕಾಗುತ್ತದೆ. ಓಸಿಗೆ ಅರ್ಜಿ ಹಾಕಿದ ನಾಲ್ಕು ದಿನಗಳಲ್ಲಿ ಪ್ರಮಾಣ ಪತ್ರ ಮಂಜೂರು ಮಾಡುತ್ತೇವೆ ಎಂದು ಮುಖ್ಯ ಇಂಜಿನಿಯರ್ ಆರ್ ಕುಕನೂರ್ ಹೇಳಿದ್ದಾರೆ.

ಏನಿದು ಓಸಿ: ಫ್ಲ್ಯಾಟ್ ಅಥವಾ ಕಟ್ಟಡದಲ್ಲಿ ವಾಸಿಸುವ ಮುನ್ನ ವಾಸಿಸಲು ಯೋಗ್ಯ ಎಂದು ಸ್ವಾದೀನ ಪ್ರಮಾಣಪತ್ರ ಪಡೆಯಬೇಕು ಎಂಬ ಕಾನೂನಿದೆ. ಬೃಹನ್ ಮುಂಬೈ ಮಹಾನಗರ ಪಾಲಿಕೆ ಕಾಯ್ದೆಯ 350(A)ನೇ ಸೆಕ್ಷನ್ ಪ್ರಕಾರ ಓಸಿ ಪಡೆಯದ ನಿವಾಸಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ.

ನೋಟಿಸ್ ಗೆ ಉತ್ತರಿಸಿ, ದಂಡ ಕಟ್ಟದಿದ್ದರೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಸಚಿನ್ ಬಂಗಲೆಯಿಂದ ಓಸಿ ಬಿಟ್ಟರೆ ಬೇರೆ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ. ಆದ್ದರಿಂದ ಓಸಿ ಬೇಗ ಸಿಗುವ ಸಾಧ್ಯತೆ ಯಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಸಚಿನ್ ಮೇಲಿನ ಪ್ರೇಮ ಭ್ರಷ್ಟಾಚಾರಕ್ಕೆ ನಾಂದಿಯಾಯ್ತೆ?...

English summary
Cricketer Sachin Tendulkar has been imposed a fine of Rs 4.75 lakh by the BMC after he moved into his 79 crore dream house located in Bandra without a Occupancy Certificate (OC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X