ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1ಸಾವಿರ ಕೋಟಿ ರೂಪಾಯಿಯ ಅಪಾರ್ಟ್ಮೆಂಟ್

|
Google Oneindia Kannada News

Pashmina Waterfront Bangalore
ಬೆಂಗಳೂರು ಸೆ 30: ಹಳೆ ಮದರಾಸು ರಸ್ತೆಯ ಕೆ ಆರ್ ಪುರಂ ನಲ್ಲಿ ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಅಪಾರ್ಟ್ಮೆಂಟ್ ತಲೆ ಎತ್ತಲಿದೆ. ನಗರದ ಇತಿಹಾಸ ದಲ್ಲಿ ಇದೇ ಮೊದಲ ಬಾರಿಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕಾಲಿಟ್ಟಿರುವ ಪಶ್ಮಿನಾ ಬಿಲ್ಡರ್ಸ್ ಇದನ್ನು ನಿರ್ಮಿಸಲಿದೆ.

ಪಶ್ಮಿನಾ ವಾಟರ್ ಫ್ರಂಟ್ ಅಪಾರ್ಟ್ಮೆಂಟ್ ಹೆಸರಿನಲ್ಲಿ ನಿರ್ಮಾಣವಾಗಲಿರುವ ಈ ಭಾರೀ ವಸತಿಗೃಹ ಹತ್ತು ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ. ಈ ಅಪಾರ್ಟ್ಮೆಂಟ್ ಇನ್ನೆರಡು ವರ್ಷಗಳಲ್ಲಿ ನಿರ್ಮಾಣವಾಗಲಿದ್ದು ಫ್ಲಾಟ್ ಒಂದರ ಬೆಲೆ ಕೇವಲ 70 ಲಕ್ಷ !!

ಸಂಪೂರ್ಣವಾಗಿ ವಾಸ್ತು ಪ್ರಕಾರವೇ ಇದು ನಿರ್ಮಾಣವಾಗಲಿದೆ. 1100 ಕ್ಕೂ ಹೆಚ್ಚು ಮನೆಗಳು ಇದರಲ್ಲಿರುತ್ತವೆ ಮತ್ತು ಅಪಾರ್ಟ್ಮೆಂಟ್ ನಲ್ಲಿ ಒಂಬತ್ತು ಗೋಪುರಗಳು ಇರುತ್ತವೆ. ಪ್ರತಿಯೊಂದು ಗೋಪುರ 38 ಮಹಡಿಗಳಷ್ಟು ಎತ್ತರವಿರಲಿದೆ. ಫ್ಲಾಟ್ ಮಾಲೀಕರಿಗೆ ಸ್ವತಂತ್ರ ಜೀವನ ನಡೆಸಲು ಅನುಕೂಲವಾಗುವಂತೆ ಪ್ರತಿ ಫ್ಲಾಟ್ ಗಳ ಮಧ್ಯೆ ಗೋಡೆ ಇರಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

English summary
Pashmina builders will construct a massive apartment near KR Puram, Bangalore. This projects estimated budget is approximate one thousand crore rupees. Each flat will cost Seventy lakhs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X