ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2500 ಬಾಷ್ ನೌಕರರ 'ಟೂಲ್ ಡೌನ್' ಮುಷ್ಕರ

By Mahesh
|
Google Oneindia Kannada News

Bosch stike, Bangalore
ಬೆಂಗಳೂರು, ಸೆ.30: ನಗರದ ಆಡುಗೋಡಿ ಘಟಕದಲ್ಲಿ ಬಾಷ್ ಕಂಪನಿಯ ನೌಕರರು 'ಟೂಲ್ ಡೌನ್' ಮುಷ್ಕರ ಹೂಡಿದ್ದಾರೆ.

ವಿಶ್ವದ ಅತಿದೊಡ್ಡ ಆಟೋಮೋಟಿವ್ ಸಾಮಾಗ್ರಿಗಳ ಉತ್ಪಾದನಾ ಸಂಸ್ಥೆ ಬಾಷ್ ನ 2,500ಕ್ಕೂ ನೌಕರರು ದೈನಂದಿನ ಕೆಲಸ ಬಿಟ್ಟು ಧರಣಿ ಕೂತಿದ್ದಾರೆ. ಬಾಷ್ ನೌಕರರಿಗೆ ಮೈಕೋ ನೌಕರರ ಸಂಘದ ಸಂಪೂರ್ಣ ಬೆಂಬಲ ಸಿಕ್ಕಿದೆ.

ಹೊರಗುತ್ತಿಗೆ ಭೂತ:
ಐಟಿ ಬಿಟಿ ಕ್ಷೇತ್ರಕ್ಕೆ ಸೀಮಿತವಾಗಿದ್ದ ಹೊರಗುತ್ತಿಗೆ ಜಾಡ್ಯವನ್ನು ಆಟೋಮೊಬೈಲ್ ಕ್ಷೇತ್ರದಲ್ಲಿ ಪರಿಚಯಿಸಲು ಸಿದ್ಧತೆ ನಡೆಸಿರುವ ಬಾಷ್ ಕಂಪನಿ ಮ್ಯಾನೇಜ್ಮೆಂಟ್ ವಿರುದ್ಧ ನೌಕರರು ಸಿಡಿದೆದ್ದಿದ್ದಾರೆ.

ಕಂಪನಿಯ ಈ ನಿರ್ಣಯದಿಂದ ಹಲವಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಮೈಕೋ ನೌಕರರ ಸಂಘದ ಅಧ್ಯಕ್ಷ ಲೋಕೇಶ್ ಹೇಳುತ್ತಾರೆ.

ಅದರೆ, ಹೊರಗುತ್ತಿಗೆಯ ಫಲವಾಗಿ ಯಾರೂ ಕೆಲಸ ಕಳೆದುಕೊಂಡಿಲ್ಲ. ಆಧುನೀಕರಣಕ್ಕೆ ನೌಕರರು ಸಿದ್ಧರಾಗಿರಬೇಕು. 1992ರಲ್ಲಿ ನೌಕರರ ಯೂನಿಯನ್ ಜೊತೆ ಮ್ಯಾನೇಜ್ಮೆಂಟ್ ಮಾಡಿಕೊಂಡ ಒಪ್ಪಂದವನ್ನು ಮೀರಿಲ್ಲ ಎಂದು ಸಂಸ್ಥೆಯ ಅಧಿಕಾರಿಗಳು ಹೇಳುತ್ತಾರೆ.

English summary
Bosch automotive ltd employees under the leadership of Mico Employees Association have launched 'tool-down strike' opposing the management decision to outsource the work at the Audugodi, Bangalore plant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X