ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೋಭಾ-ರಾಮದಾಸ್ ಭಿನ್ನಮತಕ್ಕೆ ದಸರಾ ವೇದಿಕೆ

By Mahesh
|
Google Oneindia Kannada News

Shobha and Ramdas tussle in Dasara
ಮೈಸೂರು. ಸೆ.29: ನಾಡಹಬ್ಬ ದಸರಾ 2011 ಉದ್ಘಾಟನೆ ದಿನವೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಮತ್ತು ಹಿಂದಿನ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಅವರ ನಡುವೆ ಸಣ್ಣ ಕಿತ್ತಾಟ ನಡೆದಿದೆ.

ದಸರಾ ವಸ್ತು ಪ್ರದರ್ಶನ ಮತ್ತು ಆಹಾರ ಮೇಳದ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಬರುವ ಮೊದಲು ಶೋಭಾ ಕರಂದ್ಲಾಜೆ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಜೊತೆಗೆ ಆಹಾರ ಮೇಳ ಉದ್ಘಾಟನೆಯನ್ನು ದೋಸೆ ಹಾಕುವ ಮೂಲಕ ಉದ್ಘಾಟಿಸಿದರು.

ಇದನ್ನು ದೂರದಿಂದ ಕಂಡ ಸಚಿವ ರಾಮದಾಸ್ ಗೆ ಹೊಟ್ಟೆಯಲ್ಲಿ ಹುಣಸೆ ಹಣ್ಣು ಕಿವಚಿದಂತ್ತಾಗಿದೆ. ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಿದ್ದರಿಂದ ಆಹಾರ ಮೇಳ ಕಾರ್ಯಕ್ರಮದ ವೇದಿಕೆಯಲ್ಲಿ ಒಬ್ಬರೇ ಕುಳಿತುಕೊಂಡಿದ್ದರು. ಜಿ.ಪಂ. ಸಿಇಓ ಸತ್ಯವತಿ ಹಾಗೂ ಆಹಾರ ಇಲಾಖೆ ಉಪನಿರ್ದೇಶಕಿ ಕುಮುದ ಗಿರೀಶ್ ಅವರು ಸಚಿವರ ಕೋಪ ತಣ್ಣಗೆ ಮಾಡಿ ಮತ್ತೊಮ್ಮೆ ಸಚಿವರ ಕೈಯಲ್ಲಿ ದೋಸೆ ಹಾಕಿಸಿ ಮತ್ತೊಮ್ಮೆ ಉದ್ಘಾಟನೆ ಮಾಡಿದರು.

ನಂತರ ವಸ್ತು ಪ್ರದರ್ಶನ ಉದ್ಘಾಟನಾ ಸಂದರ್ಭದಲ್ಲಿ ಇದು ವಿಕೋಪಕ್ಕೆ ಹೋಯಿತು. ರಾಮದಾಸ್ ಅವರನ್ನು ಉದ್ಘಾಟನೆಗೆ ಕರೆಯದೇ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ ಕೆ.ಆರ್.ಕ್ಷೇತ್ರದ ಕಾರ್ಯಕರ್ತರು ವಸ್ತು ಪ್ರದರ್ಶನ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬಿಸಿ ತಟ್ಟಿದ್ದು ಅಧಿಕಾರಿಗಳಿಗೆ: ವಸ್ತು ಪ್ರದರ್ಶನ ಆವರಣದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ಏರ್ಪಡಾಗಿತ್ತು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕಾರ್ಯಕ್ರಮ ಉದ್ಘಾಟಿಸಬೇಕಿತ್ತು. ಆದರೆ ಅವರು ವಿದೇಶದಲ್ಲಿದ್ದಾರೆ. ರಾಮದಾಸ್ ಅವರು ಬರುವುದು ತಡವಾದ್ದರಿಂದ 6 ಗಂಟೆ ವೇಳೆಗೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮ ಉದ್ಘಾಟಿಸಿದರು ಎಂದು ವಸ್ತುಪ್ರದರ್ಶನ ಪ್ರಾಧಿಕಾರದ ಅಧಿಕಾರಿ ಬಿಪಿ ಮಂಜುನಾಥ್ ಹೇಳಿದ್ದು ರಾಮದಾಸ್ ಬೆಂಬಲಿಗರ ಕಿವಿಗೆ ಬೀಳಲಿಲ್ಲ.

ಶೋಭಾಕರಂದ್ಲಾಜೆ ಅವರಿಗೆ ಘೇರಾವ್ ಮಾಡಲು ವಸ್ತು ಪ್ರದರ್ಶನದ ಆವರಣದ ಗೇಟಿನ ಮುಂಭಾಗಕ್ಕೆ ಬಂದಿದ್ದ ರಾಮದಾಸ್ ಬೆಂಬಲಿಗರ ಕೈಗೆ ಸಿಗದಂತೆ ಶೋಭಾ ಅವರು ಮತ್ತೊಂದು ಮಾರ್ಗದಲ್ಲಿ ಎಸ್ಕೇಪ್ ಆಗಿದ್ದರು. ಅಲ್ಲಿಂದ ವಸ್ತು ಪ್ರದರ್ಶನ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಿ ರಾಮದಾಸ್ ಬೆಂಬಲಿಗರು ಪ್ರತಿಭಟನೆ ನಡೆಸಿದರು.

English summary
Mysore district in charge minister SA Ramdas had a bitter time when he witnessed Minister Shobha Karandlaje inaugurating Dasara 2011 Exhibition show without waiting for him. Internal tussle between BJP ministers lead officer BP Manjunath to face the heated argument with Ramdas followers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X