ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೋರಣಗಲ್ಲು ವಿಜಯನಗರ ಉಕ್ಕು ಕಾರ್ಖಾನೆಗೆ ಬೀಗ?

By Prasad
|
Google Oneindia Kannada News

Sajjan Jindal
ಬಳ್ಳಾರಿ, ಸೆ. 27 : ಸುಪ್ರೀಂ ಕೋರ್ಟ್ ಆಜ್ಞೆಯ ಹಿನ್ನೆಲೆಯಲ್ಲಿ ಕಬ್ಬಿಣದ ಅದಿರು ಪೂರೈಕೆ ಕಡಿಮೆಯಾಗಿದ್ದರಿಂದ ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನಲ್ಲಿ ಇರುವ ವಿಜಯನಗರ ಉಕ್ಕು ಕಾರ್ಖಾನೆಗೆ ಬೀಗ ಜಡಿಯಲು ಜಿಂದಾಲ್ ಕಂಪನಿ ಚಿಂತಿಸುತ್ತಿದೆ.

ಸರ್ವೋಚ್ಚ ನ್ಯಾಯಾಲಯ ಅಕ್ರಮ ಗಣಿಗಾರಿಕೆಯ ಮೇಲೆ ಅಂಕುಶ ಹೇರಿದ ಮೇಲೆ ಕಬ್ಬಿಣದ ಅದಿರಿನ ಪೂರೈಕೆ ಗಣನೀಯವಾಗಿ ಇಳಿದಿದೆ. ಸ್ಟೇನ್ ಲೆಸ್ ಸ್ಟೀಲ್ ಉತ್ಪಾದನೆಯನ್ನು ಈಗಾಗಲೆ ಶೇ.70ರಷ್ಟು ಸ್ಥಗಿತಗೊಳಿಸಲಾಗಿದ್ದು, ಸಂಪೂರ್ಣ ನಿಂತರೆ ಕರ್ನಾಟಕದ ಮಾರುಕಟ್ಟೆಯಲ್ಲಿ ಸ್ಟೀಲ್ ದರ ಭಾರೀ ಪ್ರಮಾಣದಲ್ಲಿ ಏರಲಿದೆ.

ಪರಿಸ್ಥಿತಿ ಹೀಗೆ ಮುಂದುವರಿದರೆ ದೇಶದ ಅತಿ ದೊಡ್ಡ ಉಕ್ಕು ಉತ್ಪಾದಕ ಕಾರ್ಖಾನೆಯಾದ ವಿಜಯನಗರ ಘಟಕವನ್ನು ಮುಚ್ಚದೆ ಅನ್ಯ ಮಾರ್ಗವೇ ಇಲ್ಲ. ಇದರ ಪರಿಣಾಮ ಹಣದುಬ್ಬರದ ಮೇಲಾಗಲಿದೆ ಎಂದು ಜೆಎಸ್ ಡಬ್ಲ್ಯೂ ಉಪಾಧ್ಯಕ್ಷ ಮತ್ತು ಎಂಡಿ ಸಜ್ಜನ್ ಜಿಂದಾಲ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ-ಹರಾಜಿನ ಮುಖಾಂತರ ಅದಿರನ್ನು ಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ, ಇದೇ ಕಚ್ಚಾ ಉಕ್ಕು ಕೊಳ್ಳಲು ತಡೆಯಾಗಿದೆ. ಯಾವ ಉದ್ಯಮವೂ ಈ-ಹರಾಜಿನ ಮುಖಾಂತರ ಅದಿರನ್ನು ಪೂರೈಸಿಕೊಂಡು ಬದುಕಲು ಸಾಧ್ಯವಿಲ್ಲ ಎಂದು ಅವರು ಸಜ್ಜನ್ ನುಡಿದಿದ್ದಾರೆ.

English summary
JSW Steel may close Vijaynagar steel plant situated in Toranagallu in Hospet taluk in Bellary district, due to acute shortage of iron ore. JSW Steel Vice-president and MD Sajjan Jindal said, if the situation does not improve it may have to shut down the biggest producer of steel in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X