ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿಗಳ ಮೇಲೆ ಮತ್ತೆ FIR ಹಾಕಿದ ಸಿಬಿಐ

By Mahesh
|
Google Oneindia Kannada News

Janardhana Reddy
ಬೆಂಗಳೂರು, ಸೆ.28: ಆಂಧ್ರಪ್ರದೇಶದ ಗಡಿಭಾಗದಲ್ಲಿ ಬಳ್ಳಾರಿ ರೆಡ್ಡಿ ಸೋದರರು ನಡೆಸಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ತಂಡ, ಈಗ ಕರ್ನಾಟಕದಲ್ಲಿನ ಅವ್ಯವಹಾರಗಳ ಸಂಬಂಧ ಹೊಸದಾಗಿ ಚಾರ್ಚ್ ಶೀಟ್ ದಾಖಲಿಸಿದೆ.

ಬಳ್ಳಾರಿ ಜಿಲ್ಲೆಯ ಜೈಸಿಂಗ್‌ಪರ ಗ್ರಾಮದಲ್ಲಿ ಅಸೋಸಿಯೇಟೆಡ್‌ ಮೈನಿಂಗ್‌ ಕಂಪೆನಿ (ಎಎಂಸಿ) ನಡೆಸಿರುವ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್‌ ನೀಡಿರುವ ನಿರ್ದೇಶನದಂತೆ ರೆಡ್ಡಿಗಳ ವಿರುದ್ಧ FIR ದಾಖಲಿಸಲಾಗಿದೆ ಎಂದು ಬೆಂಗಳೂರಿನ ಸಿಬಿಐ ಕಚೇರಿ ಹೇಳಿದೆ.

ಆರೋಪಿಗಳು ಯಾರು?: ಈ ವರದಿಯನ್ನು ಕೂಲಂಕುಷವಾಗಿ ಸಿಬಿಐ ಅಧಿಕಾರಿಗಳು ಪರಿಶೀಲಿಸಿ ಜನಾರ್ದನ ರೆಡ್ಡಿ, ಅವರ ಪತ್ನಿ ಅರುಣಾ, ಶಾಸಕರಾದ ನಾಗೇಂದ್ರ, ಸುರೇಶ್‌ ಬಾಬು ಸೇರಿದಂತೆ 134 ಮಂದಿಯ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ. ಇದು ರಾಜ್ಯದ ಸಿಬಿಐ ಇತಿಹಾಸದಲ್ಲೇ ಹೆಚ್ಚಿನ ಪ್ರಮಾಣದ ವ್ಯಕ್ತಿಗಳ ಮೇಲೆ ಕೇಸು ದಾಖಲಿಸಿದ ಪ್ರಕರಣವಾಗಿದೆ.

ಇದಲ್ಲದೆ ಬಳ್ಳಾರಿ ರೆಡ್ಡಿಗಳಿಗೆ ಸಹಾಯ ಮಾಡಿರುವ ಐಎಎಸ್, ಐಪಿಎಸ್, ಐಎಫ್ ಎಸ್, ಬ್ಯಾಂಕ್ ಸೇರಿದಂತೆ ಇತರೆ ಸರ್ಕಾರಿ ಅಧಿಕಾರಗಳ ಮೇಲೂ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಲು ಸಿಬಿಐ ಮುಂದಾಗಿದೆ.

ಯಾವ ಯಾವ ಕೇಸ್ :
* ಐಪಿಸಿ ಸೆಕ್ಷನ್‌ 120ಬಿ (ಕ್ರಿಮಿನಲ್‌ ಪಿತೂರಿ)
* 420 (ವಂಚನೆ)
* 379 (ಕಳ್ಳತನದ ಮಾಲನ್ನು ಅಕ್ರಮವಾಗಿ ಸ್ವೀಕರಿಸಿರುವುದು)
* 411 (ಅಕ್ರಮದ ಮೂಲಕ ಸಾರ್ವಜನಿಕ ಸ್ವತ್ತಿಗೆ ಧಕ್ಕೆ)
* 427 (ಅತಿಕ್ರಮಣ) ಮತ್ತು 447 (ಸಾರ್ವಜನಿಕ ಸೇವಕನಾಗಿ ಅಧಿಕಾರ ದುರ್ಬಳಕೆ)
* ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 13(2)
* ಭಾರತೀಯ ಅರಣ್ಯ ಕಾಯ್ದೆ ನಿಯಮ 26
* ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ)ಕಾಯ್ದೆ ನಿಯಮ 23 ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.

ಇದಕ್ಕೂ ಮುನ್ನ ಹೈದರಾಬಾದಿನ ಸಿಬಿಐ ತಂಡ ಓಎಂಸಿ ಅಕ್ರಮ ಗಣಿಗಾರಿಕೆ ಸಂಬಂಧ ಸುಮಾರು 48 ಜನರ ಮೇಲೆ ಕೇಸು ದಾಖಲಿಸಿದ್ದು, ಮೇಲ್ಕಂಡ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಿಬಿಐ ಮುಂದಿನ ನಡೆ ಏನು? ಸಿಬಿಐ ತಂಡದ ಪಯಣ ಎಲ್ಲಿಗೆ? ಮುಂದೆ ನೋಡಿ...

English summary
CBI, Bangalore has filed additional chargesheet against Bellary Reddy. FIR on Gali Janardhana Reddy is related to illegal mining in Bellary and illegal ore transport
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X