ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲ್ಲಿ ಹೆಜ್ಜೆಹೆಜ್ಜೆಗೂ ಒಂದು ಜೋಗದ ಗುಂಡಿ

By Shami
|
Google Oneindia Kannada News

Sagar-Jog falls-Honnavar is a man made crater
ಬೆಂಗಳೂರು, ಸೆ. 27 : ನಾವು ಇತ್ತೀಚೆಗೆ ಬಳಸಿ ಬಳಲಿದ ರಸ್ತೆಯ ಹೆಸರು ರಾಷ್ಟ್ರೀಯ ಹೆದ್ದಾರಿ 206. ಈ ರಸ್ತೆ ತುಮಕೂರಿನಿಂದ ಆರಂಭವಾಗಿ ತಿಪಟೂರು, ಅರಸೀಕೆರೆ, ಕಡೂರು, ಭದ್ರಾವತಿ, ಶಿವಮೊಗ್ಗ, ಆಯನೂರು. ಕುಂಸಿ, ಆನಂದಾಪುರಂ, ಸಾಗರ, ಕಾರ್ಗಲ್, ಭಟ್ಕಳ ಮಾರ್ಗದಲ್ಲಿ ಸಾಗಿ ಹೊನ್ನಾವರ ತಲುಪುತ್ತದೆ.

ತುಮಕೂರಿನಿಂದ ಸಾಗರದವರೆಗೆ ರಸ್ತೆಯ ಗುಣಮಟ್ಟ ಮತ್ತು ಪ್ರವಾಸ ಹಾಗೂ ಹೀಗೂ ಪರವಾಗಿಲ್ಲ. ಆದರೆ, ಸಾಗರದಿಂದ ಹೊನ್ನಾವರ ನಡುವಿನ 75 ಕಿಲೋಮೀಟರ್ ರಸ್ತೆ ನರಕ ಸದೃಶ. ಈ ರಸ್ತೆಯಲ್ಲಿ ಪ್ರಯಾಣಿಸುವರ ಸೊಂಟ, ಹೆಗಲು, ಎಲಬುಗಳನ್ನು ಇಡಗುಂಜಿ ಗಣಪತಿಯೇ ಕಾಪಾಡಬೇಕು.

ಅಕ್ಕ ಪಕ್ಕ ನಿತ್ಯ ಹಸುರು ಕಾನನ ಮತ್ತು ಜಲಪಾತಗಳ ಜುಳುಜುಳು ಆಲಿಸುತ್ತ ಈ 75 ಕಿಮಿ ಉದ್ದದ ಈ ರಸ್ತೆಯಲ್ಲಿ ಪ್ರಯಾಣ ಮಾಡುವುದೇನೋ ಆನಂದ. ಆದರೆ ರಸ್ತೆ ಮಾತ್ರ ಡಬ್ಬಾ. ಹೆಜ್ಜೆ ಹೆಜ್ಜೆಗೂ ಒಂದೊಂದು ಜೋಗದ ಗುಂಡಿ. ರಾಜಾ ರಾಣಿ ರೋರರ್ ರಾಕೆಟ್.

ಮುಖ್ಯವಾಗಿ ಈ ರಸ್ತೆ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಹಾದಿ. ಸರಕಾರದ ಕರಪತ್ರಗಳಲ್ಲಿ, ಸ್ವಾಗತಕೋರುವ ಭಿತ್ತಿಫಲಕಗಳಲ್ಲಿ ಶಿವಮೊಗ್ಗ ಜಿಲ್ಲೆಯ ವೈಭವವನ್ನು ದಪ್ಪಕ್ಷರಗಳಲ್ಲಿ ಬಿಂಬಿಸಲಾಗಿರುತ್ತದೆ. ಶುದ್ಧ ನಗೆಪಾಟಲು. ಸ್ವಲ್ಪ ಸುತ್ತು ಬಳಸು ಆದರೂ ಪರವಾಗಿಲ್ಲ. ನೀವು ಮಾತ್ರ ಈ ರಸ್ತೆಯನ್ನು ಬಿಟ್ಟು ಬೇರೆ ಯಾವುದಾದರೂ ಮಾರ್ಗ ಹುಡುಕಿಕೊಳ್ಳಿ.

ಈ ದುರವಸ್ಥೆಯನ್ನು ಸರಿಪಡಿಸುವವರು ಯಾರು? ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಚುರುಕು ಮುಟ್ಟಿಸುವವರು ಯಾರು? ಇವತ್ತಿನಿಂದಲೇ ರಸ್ತೆ ರಿಪೇರಿ ಆರಂಭಿಸಿದರೂ ಮುಂದಿನ ಮಳೆಗಾಲದವರೆಗೂ ಪೂರ್ಣವಾಗುವ ಯೋಜನೆ ಇದಲ್ಲ. ಅಂದಹಾಗೆ ಈ ರಸ್ತೆಗೆ ರಿಪೇರಿ ಮಾಡಿ ಪ್ರಯೋಜನವಿಲ್ಲ. ಹೊಸ ರಸ್ತೆಯೇ ಆಗಬೇಕು.

ನಮ್ಮ ಸಲಹೆ ಏನೆಂದರೆ, ಈ ರಸ್ತೆಯ ಗುಣಮಟ್ಟ ಸುಧಾರಣೆಗೆ ಸಾಗರ, ಹೊನ್ನಾವರ, ಶಿವಮೊಗ್ಗ, ಭಟ್ಕಳ ಜಿಲ್ಲೆಯ ಮಾಧ್ಯಮ ಮಿತ್ರರು ಸಂಬಂಧಪಟ್ಟ ಅಧಿಕಾರಿಗಳನ್ನು ಬಡಿದೆಬ್ಬಿಸುವ ಸುದ್ದಿ ಸಮಾಚಾರಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸುವುದರ ಮೂಲಕ ಹಕ್ಕೊತ್ತಾಯ ಮಾಡಬೇಕು. ವಂದನೆಗಳು.

English summary
The National highway 206 between Sagar-Jog falls-Honnavar is a man made crater. 75 KM streatch of road is UN-motorable. A request for local media to highlight this pain on their News Papers and force National highway development authority (NH- 206) to lay new road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X