ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಂಚುರಿ ಬಾರಿಸಿದ ಬೆಂಗಳೂರು ಕೊಡವ ಸಮಾಜ

By Prasad
|
Google Oneindia Kannada News

Kodava Samaja Bangalore
ಬೆಂಗಳೂರು, ಸೆ. 27 : ಸ್ಥಾಪನೆಯಾಗಿ 100 ವರ್ಷ ಪೂರೈಸುತ್ತಿರುವ ಕೊಡವ ಸಮಾಜ ಬೆಂಗಳೂರು, ಈ ವರ್ಷ ನವೆಂಬರ್ 11ರಿಂದ 13ರವರೆಗೆ ಶತಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿದೆ. ಕೇವಲ 8 ಕುಟುಂಬದ 30 ಜನರೊಂದಿಗೆ ಆರಂಭವಾದ ಕೊಡವ ಸಮಾಜ ಸ್ಥಾಪನೆಯಾಗಿದ್ದು 1911ರಲ್ಲಿ.

ಕೂರ್ಗ್ ಅಸೋಸಿಯೇಷನ್ ಎಂದು ಹೆಸರಿದ್ದ ಸಂಸ್ಥೆ 1962ರಲ್ಲಿ ತನ್ನ ಹೆಸರನ್ನು ಬೆಂಗಳೂರು ಕೊಡವ ಸಮಾಜ ಎಂದು ಬದಲಿಸಿಕೊಂಡಿತು. ಶತಮಾನೋತ್ಸವದ ಪ್ರಯುಕ್ತ, ಫೀಲ್ಡ್ ಮಾರ್ಷಲ್ ದಿ. ಕೆ.ಎಂ. ಕಾರ್ಯಪ್ಪ ಅವರ 112ನೇ ಜನ್ಮದಿನದಂದು, ಜನವರಿ 28ರಂದು ಸೆಂಚರಿ ಲೋಗೋವನ್ನು ಕೊಡವ ಸಮಾಜ ಬಿಡುಗಡೆ ಮಾಡಿದೆ.

ಬೆಂಗಳೂರು ಕೊಡವ ಸಮಾಜ ಸುಮಾರು 40 ಸಾವಿರ ಕೊಡವರನ್ನು ಒಗ್ಗೂಡಿಸುವ ಗೂಡಾಗಿದೆ. ಕೊಡವರ ಹಬ್ಬಗಳಾದ ಕೈಲ್ ಪೊಡ್, ಕಾವೇರಿ ಸಂಕ್ರಮಣ ಮತ್ತು ಹುತ್ತರಿ ಹಬ್ಬಗಳನ್ನು ವಸಂತನಗರದಲ್ಲಿರುವ ಕೊಡವ ಸಮಾಜದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ.

ವಸಂತನಗರದಲ್ಲಿ 1 ಎಕರೆ ಜಮೀನಿನಲ್ಲಿರುವ ಕೊಡವ ಸಮಾಜ 1960ರಲ್ಲಿ ಜಯಚಾಮರಾಜೇಂದ್ರ ವಡೆಯರ್ ಅವರು ಜನರಲ್ ಕೊದಂಡೇರ ಎಂ ಕಾರ್ಯಪ್ಪ ಅವರಿಗೆ ಬಳುವಳಿಯಾಗಿ ನೀಡಿದ್ದರು. ಕೆ.ಎಂ. ಕಾರ್ಯಪ್ಪನವರು ಕೊಡವ ಸಮಾಜಕ್ಕೆ ಅದನ್ನು ಅರ್ಪಿಸಿದ್ದರು.

ಶತಮಾನೋತ್ಸವದ ಪ್ರಯುಕ್ತ ಸದಸ್ಯ ಶುಲ್ಕವನ್ನು 2,000 ರು.ಯಿಂದ 1,500 ರು.ಗೆ ಇಳಿಸಲಾಗಿದೆ. ಇನ್ನೂ ಹೆಚ್ಚೆಚ್ಚು ಕೊಡವರು ಸಮಾಜದ ಸದಸ್ಯರಾಗಬೇಕು ಎಂಬ ಉದ್ದೇಶದಿಂದ ಶುಲ್ಕವನ್ನು ಇಳಿಸಲಾಗಿದೆ ಎಂದು ಕೊಡವ ಸಮಾಜದ ಅಧ್ಯಕ್ಷ ಕೆ.ಎಂ. ಸುಬ್ಬಯ್ಯ ಅವರು ಹೇಳಿದ್ದಾರೆ.

English summary
Kodava Samaja Bangalore is completing 100 years this year. The centenary celebration of Kodava Samaja is organized on Nov 11 to 13 in Bengaluru. Kodava Samaja Bangalore was established in 1911 in Bangalore as Coorg Association.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X