ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಿಮೋಳಿ ಬಿಡುಗಡೆಗೆ ಉಡುಪಿ ಕೃಷ್ಣನ ಮೊರೆ

By Mahesh
|
Google Oneindia Kannada News

Kanimozhi mother Rajathiammal in Udupi
ಉಡುಪಿ, ಸೆ.27: 2ಜಿ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತು ಜೈಲಿನಲ್ಲಿರುವ ಡಿಎಂಕೆ ನಾಯಕಿ ಕನಿಮೋಳಿ ಬಿಡುಗಡೆಗಾಗಿ ಅವರ ತಾಯಿ ಉಡುಪಿ ಕೃಷ್ಣನ ಮೊರೆ ಹೊಕ್ಕಿದ್ದಾರೆ.

ತಿಹಾರ ಜೈಲಿನಲ್ಲಿರುವ ತಮ್ಮ ಮಗಳು ಆದಷ್ಟು ಬೇಗ ಬಿಡುಗಡೆಯಾಗಲಿ, ಪತಿ ಪರಮೇಶ್ವರ ಕರುಣಾನಿಧಿ ಅವರಿಗೆ 2ಜಿ ಜಾಲ ಸುತ್ತಿಕೊಳ್ಳದಿರಲಿ ಎಂದು ಕನಿಮೋಳಿ ತಾಯಿ ರಾಜಿತಾ ಅಮ್ಮಾಳ್ ಪ್ರಾರ್ಥಿಸಿದ್ದಾರೆ.

ಸೋಮವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಟ್ಟು ಲಕ್ಷ್ಮಿವರ ತೀರ್ಥರ ಆಶೀರ್ವಾದ ಬೇಡಿದ್ದಾರೆ. ನಂತರ ಕೊಲ್ಲೂರು ಶ್ರೀಮುಕಾಂಬಿಕಾ ದರ್ಶನಕ್ಕೆ ತೆರಳಿದ್ದಾರೆ.

ಕರುಣಾನಿಧಿ ಕುಟುಂಬದ ಮೇಲೆ 2 ಜಿ ಸೇರಿದಂತೆ ವಿವಿಧ ಹಗರಣಗಳ ಕರಿನೆರಳು ಬಿದ್ದಿದೆ ಜಯಲಲಿತಾ ಸರ್ಕಾರ ಬಂದ ಮೇಲಂತೂ ಇನ್ನಷ್ಟು ತೊಂದರೆಯಾಗಿದೆ.

ನಾಸ್ತಿಕವಾದಿಯಾದ ಕರುಣಾನಿಧಿ ಅವರ ಮೂರನೇ ಪತ್ನಿ ಭೇಟಿ ಕುತೂಹಲ ಕೆರಳಿಸಿದೆ. ಅಧಿಕಾರದಲ್ಲಿದ್ದಾಗ ಮಠಮಾನ್ಯಗಳಿಗೆ ಅನುದಾನ ನೀಡದೆ ಸತಾಯಿಸಿದ್ದ ಕರುಣಾನಿಧಿಗೆ ತಕ್ಕ ಪಾಠವಾಗಿದೆ ಎಂದು ಅಲ್ಲಿನ ಧಾರ್ಮಿಕ ನಾಯಕರು ಆಡಿಕೊಂಡಿದ್ದಾರೆ.

ಈ ನಡುವೆ ಸುಪ್ರೀಂಕೋರ್ಟ್ ನಲ್ಲಿ ಚಿದಂಬರಂ ಕೇಸ್ ಅ.12ರವರೆಗೆ ಮುಂದೂಡಲ್ಪಟ್ಟಿದೆ. ರಾಬರ್ಟ್ ವದ್ರಾ ಹಾಗೂ ಕರುಣಾನಿಧಿ ಅವರನ್ನು ಕಟಕಟೆಗೆ ಹತ್ತಿಸುವುದು ಸುಬ್ರಮಣ್ಯಂ ಸ್ವಾಮಿ ಮುಂದಿನ ಗುರಿ ಎನ್ನಲಾಗಿದೆ.

English summary
Tainted DMK leader, M Karunanidhi' daughter Kanimozhi's mother Rajathiammal had visited Udupi Sri Krishna Temple. Karunanidhi's third wife seeked blessing of lord Krishna for the release of Kanimozhi who is accused in 2G scam and lodgedin Tihar Jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X