ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರನ್ ಅಕ್ರಮ ಫೋನ್ ಲೈನ್, ಸಿಬಿಐ ತನಿಖೆ ಶುರು

By Mahesh
|
Google Oneindia Kannada News

Former Minister Dayanidhi Maran
ನವದೆಹಲಿ ಸೆ. 27: ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್‌ಗೆ ಸೇರಿದ ಚೆನ್ನೈ ನಿವಾಸಕ್ಕೆ ಅಕ್ರಮವಾಗಿ 300 ದೂರವಾಣಿ ಸಂಪರ್ಕ ಒದಗಿಸಿರುವ ಬಗ್ಗೆ ತನಿಖೆ ನಡೆಸಲು ಸಿಬಿಐ ನಿರ್ಧರಿಸಿದೆ.

ಮಾರನ್ ಟೆಲಿಕಾಂ ಸಚಿವರಾಗಿದ್ದಾಗ ಅವರ ಬೋಟ್ ಹೌಸ್ ನಿವಾಸಕ್ಕೆ ಭೂಗತ ಕೇಬಲ್ ಮೂಲಕ 323 ದೂರವಾಣಿ ಮಾರ್ಗಗಳನ್ನು ಅಳವಡಿಸಲಾಗಿತ್ತು. ಬಿಎಸ್ಸೆನ್ನೆಲ್‌ ಪ್ರಧಾನ ವ್ಯವಸ್ಥಾಪಕರ ಹೆಸರಿನಲ್ಲಿದ್ದ ಸಂಪರ್ಕವನ್ನು ನಂತರ ಮಾರನ್ ಸೋದರನ ಸನ್ ಟಿವಿ ಕಚೇರಿಗೆ ನೀಡಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳುವಂತೆ ದೂರಸಂಪರ್ಕ ಕಾರ್ಯದರ್ಶಿಗೆ 2007ರಲ್ಲಿ ಸಿಬಿಐ ಶಿಫಾರಸು ಮಾಡಲಾಗಿತ್ತು. ಅದರೆ, ಇಲಾಖೆ ಈ ಕುರಿತು ಯಾವುದೇ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ.

ಡಿಜಿಟಲ್ ನೆಟ್‌ವರ್ಕ್ : ಮೇಲ್ನೋಟಕ್ಕೆ ಮಾರನ್ ಮನೆಗೆ ಸಂಪರ್ಕ ಒದಗಿಸಿದಂತೆ ಕಾಣುತ್ತಿತ್ತು. ಅದರೆ, ಈ ಮೂಲಕ ಅತ್ಯಾಧುನಿಕ ಡಿಜಿಟಲ್ ಜಾಲವನ್ನು ಉಚಿತವಾಗಿ ಸನ್ ನೆಟ್ವರ್ಕ್ ಗೆ ಒದಗಿಸಲಾಗುತ್ತಿತ್ತು.

ಆದರೆ, ಮಾರನ್ ಗೂ ನಮಗೂ ಸಂಬಂಧವಿಲ್ಲ ಎಂದು ಸನ್ ನೆಟ್ವರ್ಕ್ ಸ್ಪಷ್ಟಪಡಿಸಿತ್ತು. ಈಗ ಸಿಬಿಐ ತನಿಖೆ ಆರಂಭಗೊಂಡರೆ, ಸನ್ ನೆಟ್ವರ್ಕ್ ಗೂ ಅದರ ಬಿಸಿ ತಟ್ಟಲಿದೆ.

English summary
CBI will start a formal probe into allegations that over 300 telephone lines were allotted to the residence of Dayanidhi Maran in Chennai and illegally linked with a SUN television channel owned by his brother.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X