ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.28ರಂದು ತಲಕಾವೇರಿಗೆ ಸಾಂಪ್ರದಾಯಿಕ ಪೂಜೆ

By * ಬಿ.ಎಂ. ಲವಕುಮಾರ್, ಮೈಸೂರು
|
Google Oneindia Kannada News

Teertodbhava at Talacauvery on Oct 17
ಮಡಿಕೇರಿ, ಸೆ. 26 : ಕರ್ನಾಟಕದ ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಅಕ್ಟೋಬರ್ 17ರಂದು ರಾತ್ರಿ 11.30ಕ್ಕೆ ಮಿಥುನ ಪುಣ್ಯ ಲಗ್ನದಲ್ಲಿ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ಹರಿದು ಭಕ್ತರನ್ನು ಪುನೀತಗೊಳಿಸಲಿದ್ದಾಳೆ.

ತೀರ್ಥೋದ್ಭವದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮಗಳು ಸೆ.28ರಿಂದ ಆರಂಭವಾಗಲಿದ್ದು, ಅಂದು ಬೆಳಿಗ್ಗೆ 8.45ಕ್ಕೆ ಪಾತಾಯಕ್ಕೆ ಅಕ್ಕಿ ಹಾಕುವುದು, ಅಕ್ಟೋಬರ್ 5ರಂದು ಅಜ್ಞಾ ಮುಹೂರ್ತ, ಅಕ್ಟೋಬರ್ 13ರಂದು ಮಧ್ಯಾಹ್ನ 12.10ಕ್ಕೆ ಅಕ್ಷಯ ಪಾತ್ರೆ ಕಾರ್ಯಕ್ರಮಗಳು ನಡೆಯಲಿವೆ.

ಈ ಬಾರಿ ರಾತ್ರಿ ಸಮಯದಲ್ಲಿ ತೀರ್ಥೋದ್ಭವವಾಗುವುದರಿಂದ ಹೆಚ್ಚಿನ ಭದ್ರತೆಯನ್ನು ಜಿಲ್ಲಾಡಳಿತ ಕೈಗೊಂಡಿದೆ. ಅಲ್ಲದೆ ಕಾವೇರಿ ತೀರ್ಥೋದ್ಭವದ ಸಂದರ್ಭ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿರುವುದರಿಂದ ವಿವಿಧ ಕಡೆಗಳಿಂದ ಸುಮಾರು 30 ಹೆಚ್ಚುವರಿ ಬಸ್‌ಗಳನ್ನು ಒದಗಿಸಲು ಸೂಚಿಸಲಾಗಿದೆ.

ನಾಡಿನೆಲ್ಲೆಡೆಯಿಂದ ಅಪಾರ ಸಂಖ್ಯೆಯಲ್ಲಿ ಬರುವ ಪ್ರವಾಸಿಗರಿಗೆ ಶೌಚಾಲಯ, ವಿದ್ಯುತ್, ಆಂಬ್ಯುಲೆನ್ಸ್ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಕಲ್ಪಿಸುವ ಸಲುವಾಗಿ ಸಂಬಂಧಿಸಿದ ಇಲಾಖೆಗಳಿಗೆ ಜಿಲ್ಲಾಡಳಿತ ಸೂಚಿಸಿದೆ.

English summary
Cauvery teertodbhava at Talacauvery will occure on October 17, 2011. Traditional pooja rituals will begin in Bhagamandala from September 28. Wide arrangements have been made by the Coorg district admin for thousands of pilgrims who come to witness the teertodbhava.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X