ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ ಎಫೆಕ್ಟ್: ಬೆಂಗ್ಳೂರಲ್ಲಿ ಆಗಾಗ ಕತ್ತಲೆ ಕತ್ತಲೆ

By Mahesh
|
Google Oneindia Kannada News

ರಾಯಚೂರು, ಸೆ.26: ಇಲ್ಲಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೂರು ಘಟಕಗಳು ಕಾರ್ಯ ನಿರ್ವಹಿಸದೇ ಸ್ಥಗಿತಗೊಂಡಿದೆ. ಇದರ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಗೊಳಿಸುವುದು ಅನಿವಾರ್ಯವಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ ಮಣಿವಣ್ಣನ್ ಹೇಳಿದ್ದಾರೆ

ತೆಲಂಗಾಣ ಬಂದ್ ಪರಿಣಾಮ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಅಡಚಣೆಯಾಗಿದೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 1, 3 ಮತ್ತು 8 ನೇ ಘಟಕಗಳಿಗೆ ಇಂಧನ ಪೂರೈಕೆಯಾಗಿಲ್ಲ. 7 ನೇ ಘಟಕದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿರುವುದರಿಂದ ರಾಜ್ಯಾದ್ಯಂತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.

ತೆಲಂಗಾಣ ಹೋರಾಟಕ್ಕೆ ಬೆಂಬಲಿಸಿ ಸಿಂಗರೇಣಿ ಕಲ್ಲಿದ್ದಿಲು ಗಣಿ ಕಾರ್ಮಿಕರು ಮುಷ್ಕರ ಮುಂದುವರೆಸಿದ್ದು, ವಾರದಲ್ಲಿ ಮುಷ್ಕರ ಅಂತ್ಯಗೊಳ್ಳದಿದ್ದರೆ ಆರ್‌ಟಿಪಿಎಸ್‌ನಲ್ಲಿ ಸಂಗ್ರಹವಿರುವ ಕಲ್ಲಿದ್ದಿಲು ಖಾಲಿಯಾಗಿ ಎಲ್ಲಾ ಘಟಕಗಳು ವಿದ್ಯುತ್ ಉತ್ಪಾದನೆ ನಿಲ್ಲಿಸುವಂತಹ ಸ್ಥಿತಿ ಎದುರಾಗುವ ಸಾಧ್ಯತೆ ಇದೆ.

ಆರ್‌ಟಿಪಿಎಸ್ ಪರ್ಯಾಯ ವ್ಯವಸ್ಥೆಗೆ ಮುಂದಾಗದಿದ್ದರೆ ರಾಜ್ಯಕ್ಕೆ ಶೇ. 40 ರಷ್ಟು ವಿದ್ಯುತ್ ಪೂರೈಕೆ ಮಾಡುವ ಆರ್‌ಟಿಪಿಎಸ್‌ನಿಂದಾಗಿ ರಾಜ್ಯ ಕತ್ತಲಲ್ಲಿ ಮುಳುಗುವ ಆತಂಕ ಎದುರಾಗಿದೆ.

ಉಳಿದಂತೆ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ 500 ಮೆಗಾವ್ಯಾಟ್ ಸಾಮರ್ಥ್ಯದ ಒಂದು ಘಟಕ ಸೆ. 2 ರಿಂದ ವಾರ್ಷಿಕ ದುರಸ್ತಿಗೆ ಬಂದ್ ಮಾಡಲಾಗಿದೆ. ಸರಾಸರಿ 10 ರಿಂದ 11 ಮಿಲಿಯನ್ ಯುನಿಟ್ ಉತ್ಪಾದನೆ ಇಳಿಕೆಯಾಗಿದೆ. ಈ ಘಟಕ ಸೆ. 30ರಂದು ಪುನರ್ ಆರಂಭವಾಗುವ ನಿರೀಕ್ಷೆ ಇದೆ.

ಆರ್‌ಟಿಪಿ ಎಸ್‌ನ ನಾಲ್ಕು ಮತ್ತು ಬಿಟಿಪಿ ಎಸ್‌ನ ಒಂದು ಘಟಕ ಸೇರಿ ಒಟ್ಟು 1340 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ನಿಂತಿದೆ. ಬೆಸ್ಕಾಂ 1250 MW ವಿದ್ಯುತ್ ಕೊರತೆ ಎದುರಿಸುತ್ತಿದೆ ಎಂದು ಮಣಿವಣ್ಣನ್ ಹೇಳಿದ್ದಾರೆ.

English summary
Three units of Raichur Thermal Power Supply (RTPS) is not functioning due to lack of charcoal supply. Telangana Bandh has effected in erratic power cuts, load shedding in Bangalore. BESCOM MD P Manivannan said we have to wait till Telangana stir is over.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X