ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಸಾರಾಯಿ ಮತ್ತೆ ಜಾರಿಗೆ ಬರಲಿ, ವಿಶ್ವನಾಥ್

|
Google Oneindia Kannada News

H Vishwanth
ಮೈಸೂರು ಸೆ 26: ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಸಾರಾಯಿ ನಿಷೇಧಿಸಿದೆ. ಇದರಿಂದ ಚುನಾವಣೆಯ ಖರ್ಚು ಅಧಿಕವಾಗಿದೆ. ಕೊಪ್ಪಳ ಕ್ಷೇತ್ರದ ಮರುಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ಹಣ ಹೆಂಡ ಹಂಚಲಾಗುತ್ತಿದೆ.

ಬಿಜೆಪಿಗೆ ಈ ವೆಚ್ಚವನ್ನು ಭರಿಸುವ ಶಕ್ತಿಯಿದೆ. ರಾಜ್ಯದಲ್ಲಿ ನಿಷೇಧಿಸಲಾಗಿರುವ ಸಾರಾಯಿಯನ್ನು ಸರಕಾರ ಹಿಂದಕ್ಕೆ ಪಡೆಯಲಿ ಎಂದು ಮೈಸೂರು ಕ್ಷೇತ್ರದ ಸಂಸದ ಎಚ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

ಚುನಾವಣೆಯಲ್ಲಿ ಹಣ ಹೆಂಡ ಜನರ ಅಪೇಕ್ಷೆ, ಅದು ಹಂಚುವುದು ಅನಿವಾರ್ಯ ಕೂಡ. ಆದ್ದರಿಂದ ಕಡಿಮೆ ಬೆಲೆಯ ಮದ್ಯವನ್ನು ಸರಬರಾಜು ಮಾಡ ಬೇಕಾಗುತ್ತದೆ. ಅದಕ್ಕೆ ಸಾರಾಯಿ ನಿಷೇಧ ಹಿಂದಕ್ಕೆ ಪಡೆದರೆ ಎಲ್ಲಾ ಪಕ್ಷಗಳಿಗೆ ಅನುಕೂಲ ಎಂದು ವಿಶ್ವನಾಥ್ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಹಣ ಹೆಂಡದಿಂದಲೇ ಒಳ್ಳೆ ಅಭ್ಯರ್ಥಿ ಸೋಲುವಂತಾಗಿದೆ. ಹಿಂದುಳಿದ ವರ್ಗದವರನ್ನು ರಾಜಕೀಯವಾಗಿ ಇತ್ತೀಚಿಗೆ ಬಳಸಿ ಕೊಳ್ಳಲಾಗುತ್ತಿದೆ, ಇದು ಒಳ್ಳೆ ಬೆಳವಣಿಗೆಯಲ್ಲ. ಶ್ರೀ ಗಣಪತಿ ಸಚ್ಚಿದಾಂದ ಸ್ವಾಮೀಜಿಯವರು ಸಭೆಯ ನಂತರ ನಿರ್ಗಮಿಸಿದ ನಂತರ ವಿಶ್ವನಾಥ್ ಅವರ ಖುರ್ಚಿಯಲ್ಲಿ ಕುಳಿತು ಅವರ ವರ್ಗದ ಜನರ ಆಕ್ರೋಶಕ್ಕೆ ಗುರಿಯಾದ ಘಟನೆ ಕೂಡ ನಡೆಯಿತು.

ಸಾರಾಯಿ ನಿಷೇಧ ಹಿಂಪಡೆಯುವ ಬಗ್ಗೆ ವಿಶ್ವನಾಥ್ ಹೇಳಿಕೆಗೆ ರಾಜ್ಯದ ಮಹಿಳಾ ಸಂಘಟನೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ.

English summary
Congress MP H Vishwanth has urged BJP has money power to buy people and break election campaign rules. Koppal election expense is fresh example. Liquor ban should be revoked else good candidate will never win poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X