ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಮುಗಿಯುತ್ತಿದ್ದಂತೆ ಯೋಗೀಶ್ವರ್ ಸಚಿವ ಸ್ಥಾನಕ್ಕೆ ಕೊಕ್

By Srinath
|
Google Oneindia Kannada News

mega-city-fraud-yogeshwar-sadanda-action
ಬೆಂಗಳೂರು, ಸೆ.25: ಸುಮಾರು 15 ವರ್ಷಗಳ ಹಿಂದೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರನ್ನು ಕರೆತಂದು ದಾಮ್ ಧೂಮ್ ಎಂದು ಸಮಾರಂಭ ನಡೆಸಿ, ಬೆಂಗಳೂರಿನ ಮಹಾಜನತೆಗೆ ಅಗ್ಗದ ನಿವೇಶನ ಕೊಡಿಸುವುದಾಗಿ ಮೆಗಾ ಟೋಪಿ ಹಾಕಿದ್ದ ಆರೋಪಿ, ಅರಣ್ಯ ಸಚಿವ ಸಿ.ಪಿ ಯೋಗೇಶ್ವರ್ ಇನ್ನೇನು ಆಗ್ಲೋ, ಈಗ್ಲೋ ಸಚಿವ ಸ್ಥಾನ ಕಳೆದುಕೊಳ್ಳುವುದು ಶತಸಿದ್ಧವಾಗಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಮುಖ್ಯಮಂತ್ರಿ ಸದಾನಂದ ಗೌಡರು, ಉಪಚುನಾವಣೆ ಬಳಿಕ ಸಂಪುಟ ವಿಸ್ತರಿಸುವುದಾಗಿ ಇದೀಗ ತಾನೆ ಪ್ರಕಟಿಸಿದ್ದಾರೆ.

ಮೆಗಾ ಸಿಟಿ ಸದಸ್ಯರು ಸುಪ್ರೀಂಕೋರ್ಟಿನಲ್ಲಿ ನ್ಯಾಯಕ್ಕಾಗಿ ಬಡಿದಾಡುತ್ತಿರುವಾಗ, ಕೇಂದ್ರದ ಹಿಂದಿನ ಕಾನೂನು ಸಚಿವರೇ ಆ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವ ಮಾತನ್ನಾಡಿರುವಾಗ, ಮೆಗಾ ವಂಚನೆಯ ಹಕೀಕತ್ತು ಏನು ವಸಿ ವಿವರಸಿ ಬನ್ನಿ ಎಂದು ಘನವೆತ್ತ ರಾಜ್ಯಪಾಲರೂ ನಾಡಿನ ಮುಖ್ಯಮಂತ್ರಿ ಸದಾನಂದ ಗೌಡರನ್ನು ನಿನ್ನೆ ರಾಜಭವನಕ್ಕೆ ಕರೆಸಿಕೊಂಡಿದ್ದರು.

ಸುಮಾರು 30 ನಿಮಿಷಗಳ ಉಭಯಕುಶಲೋಪರಿ ಮುಗಿಯುತ್ತಿದ್ದಂತೆ ರಾಜಭವನದ ಅಂಗಳಿಂದ ಹೊರಬಿದ್ಧ ಸದಾನಂದರ ಮುಖದಲ್ಲಿ ಆನಂದ ಮಾಯವಾಗಿತ್ತು ಎಂದು ಬಿಡಿಸಿ ಹೇಳಬೇಕಿಲ್ಲ. ಭಾರದ್ವಾಜ್ ಅವರು ಒಟ್ಟೊಟ್ಟಿಗೆ ಎರಡು ಪ್ರಕರಣಗಳ ಬಗ್ಗೆ ಸದಾನಂದರನ್ನು ವಿಚಾರಿಸಿಕೊಂಡಿದ್ದರು.

ಅತ್ತ ಸುಪ್ರೀಂ ಕೋರ್ಟ್ ನಿಮ್ಮ ಗಣಿ ಧಣಿಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದೆ. ಅದರ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೀರಿ? ಎಂದೂ ಭಾರದ್ವಾಜ್ ರಾಗವೆಳೆದಿದ್ದಾರೆ. ಥಟ್ಟಂತ ಸದಾನಂದರು. ಅಯ್ಯೋ ನಾನು ಏನು ಹೇಳೋಕೆ ಸಾಧ್ಯ. ಸುಪ್ರೀಂ ಚಾಟಿ ಬೀಸಿದ ಮೇಲೆ ಎಲ್ಲರೂ ಥರಗುಟ್ಟಲೇ ಬೇಕು. ಸಿಬಿಐ ತನಿಖೆಗೆ ಸಂಪೂರ್ಣವಾಗಿ ಸಹಕರಿಸುವೆ ಎಂದಿದ್ದಾರೆ. ಮುಂದ!?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X