• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎವೆರೆಸ್ಟ್ ವಿಮಾನ ಪತನ, 10 ಭಾರತೀಯರು ಸಾವು

By Mahesh
|

ಕಠ್ಮಂಡು, ಸೆ.25: ಮೌಂಟ್ ಎವೆರೆಸ್ಟ್ ವೀಕ್ಷಣೆಗೆ ತೆರಳಿದ್ದ 16 ಜನ ಪ್ರಯಾಣಿಕರ ವಿಮಾನ ಅಪಘಾತಕ್ಕೀಡಾಗಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ 18 ಜನ ಸಾವನ್ನಪ್ಪಿದ್ದು, ಒಬ್ಬರು ಮಾತ್ರ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.

ಮೃತಪಟ್ಟ 18 ಜನರಲ್ಲಿ 10 ಮಂದಿ ಭಾರತೀಯರು ಇದ್ದರು. ಮೃತರೆಲ್ಲರೂ ತಮಿಳುನಾಡು ಮೂಲದವರು ಎಂದು ತಿಳಿದು ಬಂದಿದೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ನೇಪಾಳದ ಖಾಸಗಿ ವಾಹಿನಿಗಳು ಸ್ಪಷ್ಟಪಡಿಸಿದೆ.

ಬುದ್ಧ ಏರ್ ಸಂಸ್ಥೆಗೆ ಸೇರಿದ ಈ ವಿಮಾನ ಮೊದಲಿಗೆ ಒಂದು ಗಂಟೆಗಳಿಗೂ ಅಧಿಕ ಕಾಲ ನಾಪತ್ತೆಯಾಗಿತ್ತು, ಲೂಕ್ಲಾ ವಿಮಾನ ನಿಲ್ದಾಣದಲ್ಲಿ ಕಂಟ್ರೋಲ್ ರೂಮ್ ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಎವೆರೆಸ್ಟ್ ಪರ್ವತ ವೀಕ್ಷಿಸಿ ಕಠ್ಮಂಡು ವಿಮಾನ ನಿಲ್ದಾಣಕ್ಕೆ ಹಿಂತುರುಗುವ ವೇಳೆಯಲ್ಲಿ ಕುಂಬು ಕಣಿವೆಗಳ ಮಧ್ಯೆ ಮಂಜು ಮುಸುಕಿದ ವಾತಾವರಣದಲ್ಲಿ ಸಿಲುಕಿದ ವಿಮಾನ, ಬೆಳಗ್ಗೆ 7.31 ರ ನಾಪತ್ತೆಯಾಗಿತ್ತು.

ಆನಂತರ ವಿಮಾನ, ಲಲಿತ್ ಪುರ್ ಎಂಬ ಪ್ರದೇಶದ ಮನೆಯೊಂದಕ್ಕೆ ಢಿಕ್ಕಿ ಹೊಡೆದು ಕುಸಿದಿದೆ. ಮೃತ ಪಟ್ಟವರ ಪೂರ್ಣ ವಿವರಗಳು ಇನ್ನೂ ಸಿಕ್ಕಿಲ್ಲ.

English summary
A plane belonging to Buddha Air with 16 foreign tourists and three crew members crashed in Nepal on Sunday, Sep 25. The plane was on its way to Katmandu airport from a tour of Mount Everest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more