ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೋಪಿ ಹಾಕಿಸಿಕೊಳ್ಳದ ಮೋದಿಗೆ ಶಿವಸೇನೆ ನಮೋ ನಮಃ

By Srinath
|
Google Oneindia Kannada News

modi-refuses-wear-skull-cap-shivsena-welcomes
ಪುಣೆ, ಸೆ.23: ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತ್ರಿದಿನ ಸದ್ಭಾವನಾ ಮಿಷನ್‌ ಉಪವಾಸದ ಸಂದರ್ಭದಲ್ಲಿ ಮುಸ್ಲಿಮ್‌ ಧರ್ಮಗುರು ನೀಡಿದ 'ಇಮಾಮಿ ಟೋಪಿ' ಧರಿಸಲು ನಿರಾಕರಿಸಿದ್ದಕ್ಕಾಗಿ ಶಿವಸೇನೆ ಮುಕ್ತಕಂಠದಿಂದ ಶ್ಲಾಘಿಸಿದೆ.

ಇಮಾಮ್‌ ಒಬ್ಬರು ವೇದಿಕೆ ಹತ್ತಿ ಟೋಪಿಯೊಂದನ್ನು ಮೋದಿಗೆ ನೀಡಿದರು (ಪಕ್ಕದ ಚಿತ್ರದಲ್ಲಿ ಇದನ್ನು ಕಾಣಬಹುದು). ಆದರೆ ಅದನ್ನು ಧರಿಸಲು ಮೋದಿ ನಿರಾಕರಿಸಿದರು. ಇಲ್ಲವಾದಲ್ಲಿ ಕ್ಯಾಮರಾಗಳು 'ಟೋಪಿ ಹಾಕಿಸಿಕೊಂಡ ಮೋದಿ'ಯನ್ನು ಸೆರೆ ಹಿಡಿಯುತ್ತಿದ್ದವು. ಇದರಿಂದ ಟೋಪಿ ಹಗರಣವನ್ನು ತಡೆದಂತಾಗಿದೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಶ್ಲಾಘಿಸಲಾಗಿದೆ.

ದೇಶದ ಮುಸ್ಲಿಮರನ್ನು ಓಲೈಸಲು ಮೇರೆ ಮೀರಿ ವಿಶ್ವಾಸಾರ್ಹತೆ ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ಸಾಮ್ನಾದಲ್ಲಿ ತಿಳಿಸಲಾಗಿದೆ. ಇಫ್ತಾರ್‌ ಕೂಟಗಳಲ್ಲಿ ಕಾಂಗ್ರೆಸ್‌ ನಾಯಕರು ತಲೆಗೆ ಟೋಪಿ ಧರಿಸುವುದನ್ನು ಟೀಕಿಸಲಾಗಿದೆ. ಮೋದಿ ಕೂಡಾ ಇದೇ ಹಾದಿ ಅನುಸರಿಸದಿರುವುದು ಸ್ವಾಗತಾರ್ಹ ಎಂದು ಪತ್ರಿಕೆ ಹೇಳಿದೆ.

ಶಾಂತಿ, ಏಕತೆ ಮತ್ತು ಕೋಮು ಸಾಮರಸ್ಯಕ್ಕಾಗಿ ಮೋದಿ ಗುಜರಾತ್‌ನಲ್ಲಿ ಮೂರು ದಿನಗಳ ಕಾಲ ಉಪವಾಸ ನಡೆಸಿದ್ದರು. ಸೋಮವಾರ ಉಪವಾಸ ಅಂತ್ಯಗೊಳಿಸಿದ್ದರು.

English summary
Saiyad Imam Shahi Saiyad had offered Modi the skull-cap during the Sadbhavna Mission. But the Gujarat Chief Minister Narendra Modi refused to wear it. Now, Shivsena has prised the Modi act in Samna editorial.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X