ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ: ಯಾತ್ರಿಗಳಿಗೆ 408 ಕೋಣೆಗಳ 'ವಿಷ್ಣು ನಿವಾಸ' ಆರಂಭ

By Srinath
|
Google Oneindia Kannada News

tirupati-vishnu-nivas-accomadation-railway-station
ತಿರುಪತಿ, ಸೆ.22: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಯಾತ್ರಿಗಳಿಗೆ ಇನ್ನು ಮುಂದೆ ವಸತಿ ಸಮಸ್ಯೆ ಎದುರಾಗದು. ಏಕೆಂದರೆ 'ವಿಷ್ಣು ನಿವಾಸ' ಹೆಸರಿನ ಬೃಹತ್‌ ಯಾತ್ರಿ ಸಂಕೀರ್ಣವೊಂದು ತಿರುಪತಿ ರೈಲ್ವೆ ನಿಲ್ದಾಣದ ಬಳಿ ತಲೆಯೆತ್ತಿದೆ.

ಸುಮಾರು 4 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಕಟ್ಟಡ, ಏಕಕಾಲದಲ್ಲಿ 2500 ಭಕ್ತರಿಗೆ ವಸತಿ ಸೌಕರ್ಯ ಒದಗಿಸುವ ಸಾಮರ್ಥ್ಯ ಹೊಂದಿದ್ದು 408 ಕೋಣೆಗಳನ್ನು ಒಳಗೊಂಡಿದೆ. 66 ಕೋಟಿ ರೂ. ವೆಚ್ಚದ ಈ ಯಾತ್ರಿ ಸಂಕೀರ್ಣವನ್ನು ತಿರುಮಲ ತಿರುಪತಿ ದೇಗುಲ ಮಂಡಳಿ (ಟಿಟಿಡಿ) ನಿರ್ಮಿಸಿದೆ.

ಈ ಕಟ್ಟಡವನ್ನು ಬುಧವಾರ ಆಂಧ್ರ ಸಿಎಂ ಕಿರಣ್‌ರೆಡ್ಡಿ ಉದ್ಘಾಟಿಸಿದ್ದಾರೆ. ಇದೇ ವೇಳೆ ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ತಿರುಪತಿ ಪುರಸಭೆ ನಿರ್ಮಿಸಲುದ್ದೇಶಿಸಿದ ಸ್ವಯಂಚಾಲಿತ, ಬಹು ಮಹಡಿಯ ಕಾರು ಪಾರ್ಕಿಂಗ್‌ ಕಟ್ಟಡಕ್ಕೂ ಸಿಎಂ ಶಿಲಾನ್ಯಾಸ ನೆರವೇರಿಸಿದರು.

ಈ ವಸತಿ ಸಂಕೀರ್ಣದಲ್ಲಿ 24 ವಿದ್ಯಾರ್ಥಿ ನಿಲಯಗಳು, 204 ಹವಾನಿಯಂತ್ರಿತ ಕೋಣೆಗಳು ಸೇರಿದಂತೆ ಯಾತ್ರಿಗಳ ವಿಶ್ರಾಂತಿ ಹಾಲ್‌ಗ‌ಳು, ಹೊಟೇಲ್‌, ಬ್ಯಾಂಕ್‌ ಮತ್ತು ಎಟಿಎಮ್‌ಗಳಿ ಇವೆ. ಅಲ್ಲದೇ ಸುಮಾರು 165 ನಾಲ್ಕು ಚಕ್ರ 200 ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

English summary
The Andhra Pradesh Chief Minister N. Kiran Kumar Reddy has inaugurated the Rs.66cr massive pilgrim amenities complex-Vishnu Nivas near Tirupati Railway station on Sept 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X