ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಮೃಗಾಲಯದ ನರಿಗಳಿಗೊಂದು ಕಾಲ

By Bm Lavakumar
|
Google Oneindia Kannada News

The day of the Jackals
ಮೈಸೂರು, ಸೆ. 22 : ನಾಯಿಗೊಂದು ಕಾಲ, ನರಿಗೊಂದು ಕಾಲ. ಮೈಸೂರು ಚಾಮರಾಜೇಂದ್ರ ಮೃಗಾಲಯದ ಬೋನ್‌ನಲ್ಲಿದ್ದ ಗುಳ್ಳೆನರಿಗಳಿಗೆ ಈಗ ತಮ್ಮದೇ ಆದ ಮನೆಯಲ್ಲಿ ಎಲ್ಲೆಂದರಲ್ಲಿ ನಿರ್ಭಯವಾಗಿ ಓಡಾಡುವ ಭಾಗ್ಯ ಒದಗಿಬಂದಿದೆ. ತೋಳ ಜಾತಿಯ ಅಳಿವಿನಂಚಿನಲ್ಲಿರುವ 4 ಗಂಡು, 1 ಹೆಣ್ಣು ಹೀಗೆ 5 ಗುಳ್ಳೆನರಿಗಳನ್ನು ರಕ್ಷಿಸಿ ಅವುಗಳ ಸಂತತಿಯನ್ನು ಉಳಿಸುವ ನಿಟ್ಟಿನಲ್ಲಿ ಮೃಗಾಲಯದ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.

ಇದೀಗ ಸುಮಾರು ಮೂರು ಸಾವಿರ ಚದರ ಅಳತೆಯ ಮನೆಗಳನ್ನು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಗುಳ್ಳೆನರಿಗಳಿಗಾಗಿ ನಿರ್ಮಿಸಿದ್ದು, ಮಂಗಳವಾರ ಉದ್ಘಾಟಿಸಲಾಯಿತು. ಬಳಿಕ ಬೋನ್‌ನಲ್ಲಿದ್ದ 5 ಗುಳ್ಳೆನರಿಗಳನ್ನು ಆ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ವಿಶಾಲ ಮನೆಯಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿದ್ದು, ಇವುಗಳ ಚಿನ್ನಾಟ ವೀಕ್ಷಕರಿಗೆ ಲಭ್ಯವಾಗಿದೆ.

ಮೊದಲು ಬೋನ್‌ನಲ್ಲಿದ್ದ ಸಮಯದಲ್ಲಿ ಈ ಗುಳ್ಳೆನರಿಗಳು ವೀಕ್ಷಕರ ಕಣ್ಣಿಗೆ ಬೀಳದೆ ಮೃಗಾಲಯದಲ್ಲಿದ್ದರೂ ಇಲ್ಲದಂತಾಗಿದ್ದವು. ಆದ್ದರಿಂದ ಈ ಗುಳ್ಳೆನರಿಗಳಿಗೆ ಪ್ರತ್ಯೇಕ ಮನೆಗಳನ್ನು ನಿರ್ಮಿಸಿ ಅಲ್ಲಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಮೃಗಾಲಯದಲ್ಲಿ ಹಲವು ರೀತಿಯ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಹಾವುಗಳಿಗೂ ಪ್ರತ್ಯೇಕ ಮನೆಗಳನ್ನು ನಿರ್ಮಿಸಲಾಗಿದೆ.

ಮೃಗಾಲಯಕ್ಕೆ ಹೈಟೆಕ್ ಸ್ಪರ್ಶ : ಮೃಗಾಲಯದಲ್ಲಿ ರಾಜರ ಕಾಲದ ಕೆಲವು ರಚನೆಯ ಪ್ರಾಣಿ ಮನೆಗಳಿದ್ದು ಅವುಗಳನ್ನು ರಕ್ಷಿಸಿ ಅವುಗಳ ಬಗ್ಗೆ ಮಾಹಿತಿ ನೀಡುವ ಕಾರ್ಯದೊಂದಿಗೆ ಸಿಂಗಪುರದಲ್ಲಿರುವ ಮೃಗಾಲಯದ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವ ಕಾರ್ಯ ನಡೆಯುತ್ತಿದೆ. ಇದಕ್ಕಾಗಿಯೇ ಕೆಲವು ತಿಂಗಳ ಹಿಂದೆ ಉಪನಿರ್ದೇಶಕ ವಿಜಯ್‌ಕುಮಾರ್ ಅವರು ಸಿಂಗಾಪುರಕ್ಕೆ ಭೇಟಿ ನೀಡಿ ಅಲ್ಲಿನ ಮೃಗಾಲಯದ ಬಗ್ಗೆ ಅಧ್ಯಯನ ಮಾಡಿ ಬಂದಿದ್ದಾರೆ. ಈಗಾಗಲೇ ಅಲ್ಲಿನ ಮೃಗಾಲಯಗಳಲ್ಲಿರುವ ಫಲಕಗಳಂತೆ ಆಕರ್ಷಕ ಫಲಕಗಳನ್ನು ಅಳವಡಿಸಲಾಗಿದ್ದು, ಇದು ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ತುಂಬಾ ಅನುಕೂಲವಾಗಿದೆ.

English summary
The day of the Jackals in Sri Chamarajendra Zoo in Mysore. New home with wide space has been provided to the jackals, which are treated as endangered species. Also the authorieis are giving Singapore touch to the Chamarajendra Zoological Garden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X