ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಲ್ ಕಾಮತ್ ಸ್ಮಾರಕ ಗ್ರಂಥಾಲಯ ಹೊನ್ನಾವರ

By Shami
|
Google Oneindia Kannada News

Vikas and Krishnanand Kamat (File photo)
ಬೆಂಗಳೂರು, ಸೆ. 22 : ಖ್ಯಾತ ಲೇಖಕ, ವಿದ್ವಾಂಸ, ಛಾಯಾಚಿತ್ರಕಾರ, ದಿವಂಗತ ಡಾ. ಕೃಷ್ಣಾನಂದ ಎಲ್ ಕಾಮತ್ (1934-2002) ಸ್ಮಾರಕ ಗ್ರಂಥಾಲಯ ಅವರ ತವರೂರು ಹೊನ್ನಾವರ(ಉತ್ತರ ಕನ್ನಡ ಜಿಲ್ಲೆ)ದಲ್ಲಿ ಅನಾವರಣಗೊಳ್ಳಲಿದೆ. ದಿನಾಂಕ 25 ಸೆಪ್ಟೆಂಬರ್ 2011, ಭಾನುವಾರ ಬೆಳಗ್ಗೆ 10 ಗಂಟೆ.

ಕನ್ನಡದಲ್ಲಿ ವಿಜ್ಞಾನ ಲೇಖನಗಳನ್ನು ಬರೆಯುವ ಪ್ರಸಿದ್ಧ ಲೇಖಕಿ ನೇಮಿಚಂದ್ರ ಅವರು "ಕಾಮತ್ ದತ್ತಿ ಉಪನ್ಯಾಸ" ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಈ ಸಾಲಿನ ಕಾಮತ್ ಸ್ಮಾರಕ ಪ್ರಶಸ್ತಿಯನ್ನು ಪತ್ರಕರ್ತ, ಲೇಖಕ ಪ್ರೊ. ನಿರಂಜನ ವಾನಳ್ಳಿ ಅವರಿಗೆ ಕೊಡಮಾಡಲಾಗುತ್ತದೆ.

"ಪರಿಸರಕ್ಕೆ ಕಾಮತರ ಕೊಡುಗೆ" ಶೀರ್ಷಿಕೆಯುಳ್ಳ ಕೃತಿಯನ್ನು ಡಾ. ರಮಾಕಾಂತ್ ಜೋಶಿ ಬಿಡುಗಡೆ ಮಾಡುವರು. ಕವಿ ಜಯಂತ್ ಕಾಯ್ಕಿಣಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಕೆ ಎಲ್ ಕಾಮತ್ ಅವರ ಪುತ್ರ ವಿಕಾಸ್ ಕಾಮತ್ ಗುರುವಾರ ಒನ್ ಇಂಡಿಯ ಕನ್ನಡಕ್ಕೆ ತಿಳಿಸಿದರು.

ಕೃಷ್ಣಾನಂದ ಕಾಮತ್ ಗ್ರಂಥಾಲಯದ ವಿಳಾಸ : ಲಕ್ಷ್ಮೀನಾರಾಯಣ ನಗರ, ಹೊನ್ನಾವರ 581 334 ಉತ್ತರ ಕನ್ನಡ ಜಿಲ್ಲೆ. ಗ್ರಂಥಾಲಯದ ದೂರವಾಣಿ ಸಂಖ್ಯೆ. (8387)222-888. [ಕೃಷ್ಣಾನಂದ ಕಾಮತ್ ಅವರ ಕೃತಿಗಳು]

English summary
Kannada writer, scholar, photographer Late Dr Krishnanad L Kamat memorial library opening ceremony in Honnavara, Uttara Kannada dist, Karnataka. Sunday the 25th Sept 2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X