ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಹ್ಮಣಿಯ 'ಮೆದುಳು' ಸ್ಟೀಲ್ ಗುರು ಬಿಎನ್ ಸಿಂಗ್

By Mahesh
|
Google Oneindia Kannada News

Brahmani Steels director BN Singh
ಕಡಪ, ಸೆ.22: ಬೇನಾಮಿ ಕಂಪನಿ ಬ್ರಹ್ಮಣಿಗೆ ಸ್ಟೀಲ್ ಗುರು ಬಿಎನ್ ಸಿಂಗ್ ರನ್ನು ಜನಾರ್ದನ ರೆಡ್ಡಿ ಬಹು ಜಾಣತನದಿಂದ ಕರೆ ತಂದ ವರದಿ ಇಲ್ಲಿದೆ. ಲೋಹಶಾಸ್ಟ್ರವನ್ನು ಅರೆದು ಕುಡಿದಿರುವ ಸಿಂಗ್ ಅವರು ರೆಡ್ಡಿ ಸಾಮ್ರಾಜ್ಯದ ಅಗಣಿತ ನಿಧಿ ಬ್ರಹ್ಮಿಣಿಯ ಮೆದುಳಾಗಿ ಕಾರ್ಯ ನಿರ್ವಹಿಸಿದ್ದಾರೆ.

ಬ್ರಹ್ಮಿಣಿ ಇಂಡಸ್ಟ್ರೀಸ್ ಲಿ. ನ ಪ್ರಕಾರ ಬಿಎನ್ ಸಿಂಗ್ ಬೋರ್ಡ್ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದು ಏ.6,2009ರಲ್ಲಿ. ಆದರೆ, ಬಿಎನ್ ಸಿಂಗ್ ಅವರು ಜೆಎಸ್ ಡಬ್ಲ್ಯೂ ಸ್ಟೀಲ್ ಕಂಪನಿಯ ಸಿಇಒ ಹಾಗೂ ಎಂಡಿ ಸ್ಥಾನಕ್ಕೆ 2007ರಲ್ಲಿ ರಾಜೀನಾಮೆ ನೀಡಿದ ಮೇಲೆ ಪೂರ್ಣವಾಗಿ ರೆಡ್ಡಿ ಬಳಗಕ್ಕೆ ಸೇರಿಬಿಟ್ಟಿದ್ದರು.

ಜೆಎಸ್ ಡಬ್ಲ್ಯೂ ಕಂಪನಿಯ ಸಲಹೆಗಾರರಾಗಿ ಮುಂದುವರೆದಿದ್ದ ಸಿಂಗ್, ಮುಂದೆ ಬ್ರಹ್ಮಿಣಿ ಜೊತೆ ಜೆಎಸ್ ಡಬ್ಲ್ಯೂ ಅಧಿಕೃತ ಪಾಲುದಾರಿಕೆ ಹೊಂದುವ ಬಗ್ಗೆ ಯೋಜಿಸಿದ್ದರು.

ಸುಮಾರು 64 ವರ್ಷದ ಜ್ಞಾನ ವೃದ್ಧ ಸಿಂಗ್, ಲೋಹಶಾಸ್ತ್ರ(metallurgy) ವಿಷಯದಲ್ಲಿ BIT ಇಂದ ಬಿಎಸ್ಸಿ ಹಾಗೂ ಪ್ರತಿಷ್ಠಿತ ಖರಗ್ ಪುರ್ ಐಐಟಿ ನಿಂದ ಎಂಟೆಕ್ ಪದವಿಯನ್ನು ಗಳಿಸಿದ್ದಾರೆ.

ಇದಲ್ಲದೆ ಜೆಮ್ ಶೇಡ್ಪುರದಲ್ಲಿ ಬಿಸಿನೆಸ್ ಮ್ಯಾನೇಜ್ಮೆಂಟ್ ಸ್ನಾತಕೋತ್ತರ ಪದವಿ, ರಾಂಚಿ ವಿವಿಯಿಂದ ಮೆಟಲರ್ಜಿ ವಿಷಯದಲ್ಲಿ ಪಿಎಚ್ ಡಿ ಪಡೆದಿದ್ದಾರೆ.

ಗಣಿ, ಲೋಹ, ಅದಿರು, ಭೂಮಿ, ನೀರು ಬಳಕೆ ಬಗ್ಗೆ ಸುಮಾರು 35 ವರ್ಷಗಳ ಕಾಲದ ಅನುಭವ ಹೊಂದಿದ್ದಾರೆ. ಟಾಟಾ ಸ್ಟೀಲ್, SAIL, ರಾಷ್ಟ್ರೀಯ ಇಸ್ಪಾಟ್ ನಿಗಮ ನಿಯಮಿತ(ಮಾಜಿ ಸಿಎಂಡಿ), ರೂರ್ಕೆಲಾ ಸ್ಟೀಲ್ಸ್, ಜೆಎಸ್ ಡಬ್ಲ್ಯೂ ಕಂಪನಿಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಸಿಂಗ್ ಕೊಟ್ಟ ಐಡ್ಯಾ: ಬ್ರಹ್ಮಿಣಿ ಸ್ಟೀಲ್ಸ್ ಸ್ಥಾಪನೆಗೆ ಬೃಹತ್ ಪ್ರಮಾಣದಲ್ಲಿ ಜಲ ಸಂಪತ್ತು ಅವಶ್ಯಕತೆ ಇದೆ. ಆಂಧ್ರ ಗಡಿ ಹೇಳಿಕೇಳಿ ಬರದ ನಾಡು, ಹಳ್ಳ ತೋಡಿದರೆ, ನೀರಿಗಿಂತ ಕಲ್ಲು ರಾಶಿ ರಾಶಿ ಸಿಗುತ್ತದೆ. ಹೀಗಿದ್ದಾಗ, ಜಲ ಮೂಲಕ್ಕೆ ಏನು ಮಾಡುವುದು. ಏನು ಮಾಡಿದರು ಮುಂದೆ ಓದಿ...

English summary
Brahmani Steels owned by tainted ex minister Janardhana Reddy is found to be fake. Reddy brothers inducted BN Singh a highly qualified person in metallurgy as director of BIL, Kadapa. CBI is yet to quiz BN Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X