ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂಚಕ ಸಾಫ್ಟ್‌ವೇರ್ ಕಂಪನಿಯ ಹಕೀಕತ್ತು ಏನು?

By Srinath
|
Google Oneindia Kannada News

task-informatics-cheats-arrested-hyderabad
ಹೈದರಾಬಾದ್, ಸೆ.21: ಆದರೆ ನಾಲ್ಕು ತಿಂಗಳಿಂದ ಸಂಬಳ ಪಡೆಯದ ಉದ್ಯೋಗಿಗಳು ಕಂಪನಿ ಅಸ್ತಿತ್ವದ ಬಗ್ಗೆ ಸಂಶಯ ತಾಳಿ ಸಿಇಒ ಪುನೀತ್ ಎಂಬವರನ್ನು ಪ್ರಶ್ನಿಸಿದರು. ತದನಂತರ ಉದ್ಯೋಗಿಗಳು ಮತ್ತು ಆಡಳಿತದ ನಡುವೆ ಹಲವು ಸುತ್ತಿನ ಮಾತುಕತೆಗಳೂ ನಡೆದವು. ಶನಿವಾರ ರಾತ್ರಿಯವರೆಗೂ ತನ್ನ 235 ಉದ್ಯೋಗಿಗಳಿಗೆ ಸಂಬಳ ನೀಡುವುದಾಗಿ ನಂಬಿಸಿ ಅವರನ್ನು ಸಮಾಧಾನ ಪಡಿಸಲು ಕಂಪನಿ ಪ್ರಯತ್ನಿಸಿತ್ತು.

ಆದರೆ, ಭಾನುವಾರವೂ ತಮ್ಮ ಖಾತೆಗಳಿಗೆ ಸಂಬಳ ವರ್ಗಾವಣೆಯಾಗದ ಹಿನ್ನೆಲೆಯಲ್ಲಿ ಉದ್ಯೋಗಿಗಳು ಮಾದಪುರಕ್ಕೆ ಹೋಗಿ ಆಡಳಿತ ನಿರ್ದೇಶಕ ಉಮರ್ ಅಲಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುನೀತ್‌ನನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ, ತಾವು ಸಂಬಳ ಕೊಡುವ ಪರಿಸ್ಥಿತಿಯಲ್ಲಿ ಇಲ್ಲವೆಂದು ಅವರಿಬ್ಬರು ಉದ್ಯೋಗಿಗಳಿಗೆ ಸ್ಪಷ್ಟಪಡಿಸಿದರೆನ್ನಲಾಗಿದೆ.

ಇದರಿಂದ ಕೋಪಗೊಂಡ ಉದ್ಯೋಗಿಗಳು ಅವರಿಬ್ಬರಿಗೆ ಥಳಿಸಿ ಕಚೇರಿಯಲ್ಲಿನ ಕೆಲವು ಪೀಠೋಪಕರಣಗಳಿಗೆ ಹಾನಿ ಮಾಡಿದರು ಎನ್ನಲಾಗಿದೆ. ಈ ನಡುವೆ, ಪೊಲೀಸರು ಸ್ಥಳಕ್ಕೆ ಆಗಮಿಸಿ ಕಂಪನಿಯ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ವಶಕ್ಕೆ ತೆಗೆದುಕೊಂಡರು.

ಆತಂಕದ ವಿಷಯವೆಂದರೆ ನಗರದಲ್ಲಿನ ಈ ಎರಡು ಕಚೇರಿಗಳಲ್ಲದೆ ತಮಗೆ ಬೆಂಗಳೂರು ಮತ್ತು ಪುಣೆಗಳಲ್ಲಿ ಇನ್ನೂ ಎರಡು ಕಚೇರಿಗಳಿವೆ ಎಂದು ಅವರು ಹೇಳಿದ್ದಾರೆ. ಈ ಶಾಖೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

'ಕಂಪನಿಯು ಉದ್ಯೋಗಿಗಳಿಂದ ಸುಮಾರು 80 ಲಕ್ಷ ರೂ. ಸಂಗ್ರಹಿಸಿದೆ. ಉದ್ಯೋಗಿಗಳು ಸಲ್ಲಿಸಿದ ದೂರಿನ ಆಧಾರದಲ್ಲಿ ಉಮರ್ ಅಲಿ, ಸಲೀಂ, ಪುನೀತ್ ಮತ್ತು ಇತರರ ವಿರುದ್ಧ ಐಪಿಸಿಯ 420ನೆ ಪರಿಚ್ಛೇದದನ್ವಯ ವಂಚನೆ ಪ್ರಕರಣ ದಾಖಲಿಸಲಾಗಿದೆ' ಎಂದು ಪೊಲೀಸರು ಹೇಳಿದ್ದಾರೆ.

English summary
Task Informatics in Hyderabad cheats employees. The Software company is now closed down. And officials are arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X