ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ಫೇಸ್ ಬುಕ್ ಗೆ ನಿಷೇಧ, ಗೂಗಲ್ ನೆಕ್ಸ್ಟ್?

By Mahesh
|
Google Oneindia Kannada News

Facebook banned in Pakistan
ಇಸ್ಲಾಮಾಬಾದ್, ಸೆ.20: ಕೋಮು ದಳ್ಳುರಿಗೆ ಕಾರಣವಾಗುವ, ಮತೀಯ ಸಂಘರ್ಷ ಹುಟ್ಟುಹಾಕುತ್ತಿರುವ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಅನ್ನು ನಿಷೇಧಿಸುವಂತೆ ಅಧಿಕಾರಿಗಳಿಗೆ ಲಾಹೋರ್ ಹೈಕೋರ್ಟ್ ಆದೇಶ ನೀಡಿದೆ.

ನ್ಯಾಯಾಧೀಶ ಶೇಕ್ ಅಜ್ಮತ್ ಸಯೀದ್ ಅವರು ಪಾಕಿಸ್ತಾನದ ಮಾಹಿತಿ ತಂತ್ರಜ್ಞಾನ ಇಲಾಖೆಗೆ ಈ ರೀತಿ ಆದೇಶ ನೀಡಿದ್ದಾರೆ. ಈ ರೀತಿಯ ಕೋಮು ಸೌಹಾರ್ದತೆಗೆ ಭಂಗ ತರುವ, ಇಸ್ಲಾಂ ವಿರೋಧಿ ವೆಬ್ ತಾಣಗಳನ್ನು ನಿಷೇಧಿಸಿ ಎಂದು ಸೂಚಿಸಲಾಗಿದೆ.

ಅಜರ್ ಮಹಮ್ಮದ್ ಸಿದ್ಧಿಕಿ ಎಂಬ ವಕೀಲರು, ಪ್ರವಾದಿ ಮಹಮ್ಮದ್ ಹಾಗೂ ಇಸ್ಲಾಂ ಬಗ್ಗೆ ಅವಹೇಳನಕಾರಿ ಅಂಶಗಳನ್ನು ಪ್ರದರ್ಶಿಸುತ್ತಿರುವ ಫೇಸ್ ಬುಕ್ ನಿಷೇಧಿಸಬೇಕು ಎಂದು ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದರು.

ಗೂಗಲ್ ಗೂ ನಿಷೇಧದ ಭೀತಿ: ಭಯೋತ್ಪಾದನಾ ಕೃತ್ಯಗಳ ತನಿಖೆ ವೇಳೆ ಗೂಗಲ್ ಸಂಸ್ಥೆ ನಮಗೆ ಸರಿಯಾದ ಸಹಕಾರ ನೀಡುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ, ಗೂಗಲ್, ಯೂಟ್ಯೂಬ್ ನಿಷೇಧಕ್ಕೆ ಮುಂದಾಗಬೇಕಾಗುತ್ತದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ರೆಹ್ಮಾನ್ ಮಲಿಕ್ ಎಚ್ಚರಿಸಿದ್ದಾರೆ.

ಫೆಡರಲ್ ಇನ್‌ವೆಸ್ಟಿಗೇಶನ್ ಏಜೆನ್ಸಿ(ಎಫ್‌ಬಿಐ) ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲಿಕ್, ತಾಲಿಬಾನ್ ಸೇರಿದಂತೆ ಉಗ್ರ ಸಂಘಟನೆಗಳು ಗೂಗಲ್ ನೆಟ್ ವರ್ಕ್ ಅನ್ನು ಬಹು ಜಾಣ್ಮೆಯಿಂದ ಬಳಸುತ್ತಿದೆ. ಇದರಿಂದ ಉಗ್ರಗಾಮಿಗಳ ಚಟುವಟಿಕೆಗಳ ಜಾಡು ಹಿಡಿಯಲು ಸಾಧ್ಯವಾಗುತ್ತಿಲ್ಲ.

ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕಲು ಪಾಕಿಸ್ತಾನ ಬದ್ಧವಾಗಿದ್ದು, ಗೂಗಲ್ ಸಂಸ್ಥೆ ನಮ್ಮ ಅಧಿಕಾರಿಗಳಿಗೆ ನೆರವಾಗಬೇಕು ಎಂದು ಮಲಿಕ್ ಒತ್ತಾಯಿಸಿದ್ದಾರೆ.

ಮಂಬೈ ಬಾಂಬ್ ಸ್ಪೋಟಕ್ಕೆ ಪಾಕ್ ಉಗ್ರರ ಕೈವಾಡ ಇದೆಯೇ? ಎಂದು ಪ್ರಶ್ನಿಸಿದರೆ, ಉಗ್ರರ ಸಂಘಟನೆಗಳು ಬಳಸಿದ ಮಾಹಿತಿ ಯುಎಸ್ ಸರ್ವರ್ ಗಳಿಂದ ರವಾನೆಯಾಗಿರುವುದು ದೃಢಪಟ್ಟಿದೆ. ಹಾಗಾಗಿ ಪಾಕ್ ಮೂಲದ ಉಗ್ರರ ಕೈವಾಡ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಮಲಿಕ್ ಹೇಳಿದ್ದಾರೆ.

English summary
Pakistan Interior Minister Rehman Malik has said that if Google and Youtube do not help the Pakistan government, then Pakistan will block services to prevent terrorists from using it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X