ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾ.ಪಾಟೀಲ್‌ ರಾಜೀನಾಮೆ ಅಂಗೀಕಾರ ಸಾಧ್ಯತೆ ಹೆಚ್ಚು

By Srinath
|
Google Oneindia Kannada News

lokayukta-patil-resign-governor-bhardwaj-may-accept
ಬೆಂಗಳೂರು, ಸೆ.20: ಲೋಕಾಯುಕ್ತ ನ್ಯಾ. ಶಿವರಾಜ್‌ ಪಾಟೀಲ್‌ ರಾಜೀನಾಮೆಯನ್ನು ರಾಜ್ಯಪಾಲ ಭಾರದ್ವಾಜ್ ಅವರು ಮಂಗಳವಾರ ಅಂಗೀಕರಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಹೌಸಿಂಗ್‌ ಸೊಸೈಟಿಯಿಂದ ನಿವೇಶನ ಪಡೆದು ವಿವಾದಕ್ಕೆ ತುತ್ತಾಗಿರುವುದರಿಂದ ನೈತಿಕತೆ ಹೊತ್ತು ನ್ಯಾ. ಪಾಟೀಲರು ರಾಜೀನಾಮೆ ನೀಡಿದ್ದಾರೆ. ಅದನ್ನು ಅಂಗೀಕರಿಸುವುದೋ, ಬೇಡವೋ ಎಂದು ರಾಜ್ಯಪಾಲ ಭಾರದ್ವಾಜ್ ಅವರು ಮುಖ್ಯಮಂತ್ರಿ ಸದಾನಂದ ಗೌಡರನ್ನು ಕೇಳುವುದು ಖಂಡಿತ. 11 ಗಂಟೆಗೆ ಈ ಇಬ್ಬರ ಪರಸ್ಪರ ಭೇಟಿ ನಿಕ್ಕಿಯಾಗಿದೆ.

ಸ್ವತಃ ಕಾನೂನು ಪಂಡಿತರಾದ ಭಾರದ್ವಾಜರಿಗೆ ಇಂತಹ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂಬುದು ಚೆನ್ನಾಗಿ ತಿಳಿದಿದೆ. ಇಲ್ಲಿ ಅನಾಯಸಾವಾಗಿ ಜ್ಞಾಪಕಕ್ಕೆ ಬರಯುತ್ತಿರುವ ಸಂಗತಿಯೆಂದರೆ ಇತ್ತೀಚೆಗೆ ಗುಜರಾತಿನ ರಾಜ್ಯಪಾಲೆ ಮುಖ್ಯಮಂತ್ರಿಯ ಸಲಹೆಯನ್ನೂ ಕೇಳದೆ ಲೋಕಾಯುಕ್ತರನ್ನು ನೇಮಸಿದ್ದು. ಭಾರದ್ವಾಜರು ಗುಜರಾತಿನ ರಾಜ್ಯಪಾಲರಿಂದ ಏನಾದರೂ ಪ್ರೇರಣೆ ಪಡೆಯುತ್ತಾರಾ!?. ಕಾದುನೋಡುವ.

ಆದರೆ ಅದಕ್ಕೂ ಮುನ್ನ, ಈ ಹಿಂದೆ ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಭಾರದ್ವಾಜ್ ಅವರು ರಾಜಭವನದಲ್ಲೇ ಅದನ್ನು ತಿರಸ್ಕರಿಸಿದ್ದರು. ಆಗ ನ್ಯಾ. ಹೆಗ್ಡೆ ಅವರ ವಿರುದ್ಧ ಈಗಿನಂತೆ ಯಾವುದೇ ಭ್ರಷ್ಟಾಚಾರ ಆರೋಪ ಕೇಳಿ ಬಂದಿರಲಿಲ್ಲ. ಇದಕ್ಕೆ ವಿರುದ್ಧವಾಗಿ ಭ್ರಷ್ಟರನ್ನು ಬಡಿದುಹಾಕಲು ಹೆಚ್ಚಿನ ಅಧಿಕಾರ ನೀಡಿ ಎಂದು ಅಲವತ್ತುಕೊಂಡಿದ್ದರು. ಅದು ಸಾಧ್ಯವಾಗದೇ ಹೋದಾಗ ರಾಜೀನಾಮೆ ಬೆದರಿಕೆಯೊಡ್ಡಿದ್ದರು.

ಆದಾದನಂತರ ಭ್ರಷ್ಟಾಚಾರ ಆರೋಪಗಳು ಬಂದಾಗಲೆಲ್ಲಾ ರಾಜ್ಯಪಾಲ ಭಾರದ್ವಾಜ್ ಅವರು ಸೆಕೆಂಡ್ ಥಾಟ್ ಗೆ ಹೋಗದೆ ನಗುನಗುತ್ತಲೇ ರಾಜೀನಾಮೆ ಸ್ವೀಕರಿಸಿದ ಪ್ರಸಂಗಗಳಿವೆ. ಅಂತಹುದರಲ್ಲಿ ಈಗ ಲೋಕಾಯುಕ್ತ ನ್ಯಾ. ಪಾಟೀಲರ ವಿರುದ್ಧ ಗುರುತರ ಆರೋಪ ಕೇಳಿಬಂದಿರುವಾಗ ಸೆಕೆಂಡ್ ಥಾಟ್ ಗೆ ಹೋಗದೆ ನಸುನಗುತ್ತಲೇ ಅವರು ರಾಜೀನಾಮೆ ಸ್ವೀಕರಿಸಿರುವ ಸಾಧ್ಯತೆಯಿದೆ.

English summary
Disheartened by media campaign Karnataka Lokayukta Shivaraj V Patil has quit the post. And the Governor HR Bhardwaj may accept it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X