ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಐಡಿ ಪೊಲೀಸರಿಂದ ಬಂಧನದ ನಿರೀಕ್ಷೆಯಲ್ಲಿ ಡಾ. ಕೃಷ್ಣ

By Srinath
|
Google Oneindia Kannada News

info-commissioner-krishna-may-be-arrested
ಬೆಂಗಳೂರು, ಸೆ.20: ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹಾಗೂ ಕೆಎಎಸ್‌ ಅಭ್ಯರ್ಥಿಗೆ ಜೀವಬೆದರಿಕೆ ಹಾಕಿರುವ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜತೆಗೆ ಅಧೀನ ನ್ಯಾಯಾಲಯ ಹಾಗೂ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನಿರಾಕರಿಸಿರುವ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಎಚ್‌.ಎನ್‌. ಕೃಷ್ಣ ಅವರನ್ನು ಯಾವುದೇ ಕ್ಷಣ ಬಂಧಿಸಿ, ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.

ಪ್ರಕರಣ ಯಾವುದು?: 1998ರ ಕೆಎಎಸ್‌ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ್ದ ಅಲ್ಲಾಭಕ್ಷ್ ಎಂಬ ಅಭ್ಯರ್ಥಿಗೆ ಜೀವ ಬೆದರಿಕೆ ಹಾಕಿ ಬಲವಂತವಾಗಿ ಕೆಲವು ದಾಖಲೆಗಳ ಮೇಲೆ ಸಹಿ ಹಾಕಿಕೊಂಡಿರುವ ಆರೋಪ ಎಚ್‌.ಎನ್‌. ಕೃಷ್ಣ ಮೇಲಿದೆ. ಜತೆಗೆ ಸ್ವಜನ ಪಕ್ಷಪಾತ, ಒಂದೇ ವರ್ಗದ ಜನರಿಗೆ ಹೆಚ್ಚು ಉದ್ಯೋಗ ಅವಕಾಶ ಸಿಗುವಂತೆ ಮಾಡಿದ್ದಾರೆ.

ಜತೆಗೆ, ಸಹೋದ್ಯೋಗಿಗಳು ಮತ್ತು ಕೆಪಿಎಸ್‌ಸಿ ಸಿಬ್ಬಂದಿ ಮೇಲೆ ಒತ್ತಡ ಹೇರಿ ದಾಖಲೆಗಳನ್ನು ತಿದ್ದಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ವಂಚಿಸಿರುವ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾ. ಎಚ್‌. ಬಿಳ್ಳಪ್ಪ ಅರ್ಜಿಯನ್ನು ವಜಾ ಮಾಡಿದರು.

2005ರಲ್ಲಿ ನಡೆದ ಕೆಎಎಸ್‌ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆಗೆ ಗೈರು ಹಾಜರಾಗುವಂತೆ ಅಲ್ಲಾಭಕ್ಷ್ ಮೇಲೆ ಎಚ್‌.ಎನ್‌. ಕೃಷ್ಣ ಒತ್ತಡ ಹೇರಿದ್ದರು. ಜತೆಗೆ ಈ ಅಭ್ಯರ್ಥಿಯನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ ಜೀವಬೆದರಿಕೆ ಹಾಕಿ ಕೆಲವು ದಾಖಲೆಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

English summary
Resginations followed by police arrests of some prominent people in stategic positions are on the cards in Karnataka. Information Commissioner Dr H N Krishna is on the verge of arrest by CID police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X