ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರದಲ್ಲಿ ರೈಲ್ವೆ ಇಲಾಖೆಗೆ ಅಗ್ರಸ್ಥಾನ

|
Google Oneindia Kannada News

India Railways
ನವದೆಹಲಿ ಸೆ 20: ಅವ್ಯವಹಾರ ಮತ್ತು ಕರ್ತವ್ಯ ಲೋಪ ಆರೋಪ ಹೊತ್ತಿರುವ ರೈಲ್ವೆ ಇಲಾಖೆ ಸಚಿವಾಲಯದ ಅಧಿಕಾರಿಗಳ ವಿರುದ್ದ ಹೆಚ್ಚಿನ ಸಂಖ್ಯೆಯ ದೂರು ಸ್ವೀಕರಿಸಲಾಗಿದ್ದು ಭ್ರಷ್ಟಾಚಾರದಲ್ಲಿ ರೈಲ್ವೆ ಇಲಾಖೆ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಜಾಗೃತ ಆಯೋಗ (ಸಿವಿಸಿ) ತಿಳಿಸಿದೆ.

ಸಿವಿಸಿ 2010 ರಲ್ಲಿ ಸ್ವೀಕರಿಸಿದ 25 ,360 ದೂರುಗಳ ಪೈಕಿ 8300 ಕ್ಕೂ ಹೆಚ್ಚು ದೂರಗಳು ರೈಲ್ವೆ ಇಲಾಖೆಗೆ ಸಂಬಂಧಪಟ್ಟಿದ್ದು. 6520 ಬ್ಯಾಂಕಿಂಗ್, 1836 ಪೆಟ್ರೋಲಿಯಂ ಮತ್ತು 1572 ದೂರುಗಳು ದೂರಸಂಪರ್ಕ ಇಲಾಖೆಗೆ ಸೇರಿದ್ದು ಎಂದು ಸಿವಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

2010 ರ ತನ್ನ ವಾರ್ಷಿಕ ವರದಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡುತ್ತಾ, ಕಸ್ಟಮ್ಸ್ ಮತ್ತು ಸುಂಕ ಅಧಿಕಾರಿಗಳ ವಿರುದ್ದದ ಭ್ರಷ್ಟಾಚಾರ ದೂರುಗಳು 1317 , ಉಕ್ಕು ಸಚಿವಾಲಯದ ಸಿಬಂದಿಗಳ ವಿರುದ್ದ 1015 , ಕಲ್ಲಿದ್ದಲು ಸಚಿವಾಲಯದ ವಿರುದ್ದ 1106 ದೂರಗಳು ದಾಖಲಾಗಿವೆ ಎಂದು ತಿಳಿಸಿದೆ.

ಆರೋಪಿ ಅಧಿಕಾರಿಗಳ ವಿರುದ್ದ ಆರು ತಿಂಗಳಾದರೂ ಶಿಸ್ತುಕ್ರಮ ಜರುಗಿಸದೆ ವಿಳಂಬ ಅನುಸರಿಸಿರುವ ಸ್ಥಳೀಯ ಸರಕಾರಗಳ ನಿರ್ಲಕ್ಷ್ಯ ವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿ ಸಿವಿಸಿ ಕಳುಹಿಸಿರುವ ದೂರುಗಳಲ್ಲಿ ಹೆಚ್ಚಿನವು ರೈಲ್ವೆ ಮತ್ತು ದೂರಸಂಪರ್ಕ ಖಾತೆಗೆ ಸೇರಿದ್ದು ಎಂದು ಸಿವಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

English summary
The Central Vigilance Commission said that the Indian Railways tops the corruption list, since the complaints against the Railway Ministry officials alleged irregularities in discharging their duty is the maximum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X