ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಸೆಂ ಕೃಷ್ಣ ಅಕ್ರಮ ಗಣಿಗಾರಿಕೆ ಪಿತಾಮಹ

By Mahesh
|
Google Oneindia Kannada News

SM Krishna grandfather of illegal mining
ಕೊಪ್ಪಳ, ಸೆ.20: ಅಕ್ರಮ ಗಣಿಗಾರಿಕೆ ಕಾಂಗ್ರೆಸ್‌ ಪಾಪದ ಕೂಸು, ಎಸ್ಸೆಂ ಕೃಷ್ಣ ಪಾಪದ ಪಿತಾಮಹ ಎಂದು ಜೆಡಿಎಸ್ ವಕ್ತಾರ ವೈಎಸ್ ವಿ ದತ್ತಾ ಆರೋಪಿಸಿದ್ದಾರೆ.

ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಗಣಿಗಾರಿಕೆಗೆ ಪಿತಾಮಹ ಆಗಿದ್ದರು ಎಂದು ಅವರು 1995 ರಿಂದ 2002 ರಲ್ಲಿ ಕಬ್ಬಿಣದ ಅದಿರನ್ನು ಚೀನಾಕ್ಕೆ ರಪ್ತು ಮಾಡಲು ಖಾಸಗಿಯವರಿಗೆ ಪರವಾನಗಿ ನೀಡಿದರು.

ನಂತರ 2003 ಮಾರ್ಚ್ 15 ರಂದು ಜೆಡಿಎಸ್ ಪಕ್ಷದ ಬೆಂಬಲ ಪಡೆದು ಮುಖ್ಯಮಂತ್ರಿ ಧರ್ಮಸಿಂಗ್ ಗಣಿಗಾರಿಕೆಗೆ ಖಾಸಗಿಯವರಿಗೆ ಪರವಾನಿಗೆ ನೀಡಲು ಮುಂದಾದರು.

ಆಗ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡ್ರು ಈ ನಮ್ಮ ರಾಜ್ಯದ ಸಂಪತ್ತನ್ನು ಖಾಸಗಿಯವರಿಗೆ ನೀಡಬಾರದು ಎಂದು ಧರ್ಮಸಿಂಗ್ ಅವರಿಗೆ ಎಚ್ಚರಿಕೆಯ ಪತ್ರ ನೀಡಿದ್ದರು ಎಂದು ದತ್ತಾ ಚರಿತ್ರೆ ಪುಟಗಳನ್ನು ಬಿಚ್ಚಿಟ್ಟರು.

ಉಪ ಚುನಾವಣೆ ಬಿಜೆಪಿ ಸಾಧನೆ: ಈ ಆಪರೇಷನ್ ಕಮಲದಿಂದ ರಾಜ್ಯದಲ್ಲಿ 18 ಉಪ ಚುನಾವಣೆ ಅದರಲ್ಲಿ 3 ಕ್ಷೇತ್ರದಲ್ಲಿ ಶಾಸಕರು ಸಾವನ್ನಪ್ಪಿದ್ದಾರೆ. ಇನ್ನೂಳಿದದ್ದು ಆಪರೇಷನ್ ಕಮಲದ ಬಲೆಗೆ ಬಿದ್ದು ಉಪಚುನಾವಣೆ ನಡೆದಿದೆ. ಇದರಲ್ಲಿ 11 ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಜೆಡಿಎಸ್ ಪಕ್ಷದಿಂದ 3 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಈಗ ಕೊಪ್ಪಳದ ಉಪಚುನಾವಣೆ ನಮ್ಮ ಪಕ್ಷದಿಂದಲೇ 2 ಬಾರಿ ಚುನಾಯಿತನಾಗಿ ನಂತರ ಒಮ್ಮೆ ಪಕ್ಷೇತರನಾಗಿ, ಒಮ್ಮೆ ಬಿಜೆಪಿಯಿಂದ ಸೋಲನ್ನು ಕಂಡ ಕರಡಿ ಸಂಗಣ್ಣ ಈಗ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ.

ದ್ರೋಹಿ ಕರಡಿಗೆ ತಕ್ಕ ಪಾಠ : ಇತ್ತ ಮತದಾರರಿಗೆ ಮೋಸ ಮಾಡಿ ಪಕ್ಷಕ್ಕೆ ದ್ರೋಹ ಬಗೆದಿದ್ದಾನೆ. ಈ ಹಿಂದೆ ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿ ಇದ್ದಾಗ ಕೊಪ್ಪಳ ಕ್ಷೇತ್ರಕ್ಕೆ ಕಾಲೇಜುಗಳು ಮಂಜೂರಾಗಿದ್ದವು. ಅದನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಆ ಕಾಲೇಜುಗಳನ್ನು ರದ್ದು ಮಾಡಿದ್ದರು.

ಆಗ ಸಂಗಣ್ಣ ಕರಡಿಯವರುನನ್ನ ಬಳಿ ಬಂದಾಗ ಎಲ್ಲರೂ ಸೇರಿ ಹೋರಾಟ ಮಾಡಿ ಮತ್ತೆ ಕಾಲೇಜುಗಳನ್ನು ಪಡೆದಿದ್ದು ಮರೆತಿದ್ದಾರೆ. ಇಲ್ಲಿಯ ಮತದಾರರು ಪ್ರಜ್ಞಾವಂತರು ಈ ಬಾರಿ
ಅವರಿಗೆ ಪಾಠ ಕಲಿಸೇ ಕಲಿಸುತ್ತಾರೆ. ನಮ್ಮ ಪಕ್ಷದ ಅಭ್ಯರ್ಥಿ ಪ್ರದೀಪ್ ಗೌಡ ಪಾಟೀಲ್ ಗೆಲ್ಲುವುದು ನಿಶ್ಚಿತ ಎಂದು ತಿಳಿಸಿದರು.

English summary
Congress leaders should realize that illegal mining is their child and then cm SM Krishna is the grandfather of illegal mining activities in Karnataka said JDS spokesperson YSV Datta,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X