ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೋಟಿಗಾಗಿ ನೋಟು: ಸೋನಿಯಾ ಕಾರ್ಯದರ್ಶಿ ಅಹ್ಮದ್ ರುವಾರಿ

By Mahesh
|
Google Oneindia Kannada News

Ahmed Patel
ನವದೆಹಲಿ, ಸೆ. 19: 2008ರಲ್ಲಿ ಯುಪಿಎ ಸರಕಾರದ ವಿರುದ್ಧದ ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿ ನಡೆದ ವೋಟಿಗಾಗಿ ನೋಟು ಪ್ರಕರಣದಲ್ಲಿ ಪ್ರಮುಖ ರುವಾರಿ ಸೋನಿಯಾ ಗಾಂಧಿಯ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಎಂದು ಹಿರಿಯ ವಕೀಲ ರಾಮ್ ಜೇಠ್ಮಲಾನಿ ಹೇಳಿದ್ದಾರೆ.

ಮತ ಲಂಚ ನೀಡಿದ್ದು ಕಾಂಗ್ರೆಸ್ ನಾಯಕ ಎಂದು ದಿಲ್ಲಿ ಕೋರ್ಟ್‌ ನಲ್ಲಿ ಅಮರ್ ಸಿಂಗ್ ಪರ ವಕೀಲ ರಾಂ ಜೇಠ್ಮಲಾನಿ ಹೇಳುವ ಮೂಲಕ ಪ್ರಕರಣದ ದಿಕ್ಕು ಬದಲಿಸಿದ್ದಾರೆ.

ಇಲ್ಲಿನ ಲೀ ಮೆರಿಡಿಯನ್ ಹೊಟೇಲ್‌ನಲ್ಲಿ ಸಂಸದರಿಗೆ ಮತ ಲಂಚ ನೀಡಿದ್ದು, ಹಣದ ಮೂಲ ಒದಗಿಸಿದ್ದು ಅಹ್ಮದ್ ಪಟೇಲ್ ಎಂದು ವಿಶೇಷ ನ್ಯಾಯಾಧೀಶೆ ಸಂಗೀತಾ ದಿಂಗ್ರಾ ಸೆಹ್ಗಲ್ ಮುಂದೆ ಹೇಳಿದರು.

ಮತ ಲಂಚ ನೀಡಿದ್ದು, ಅಮರ್ ಸಿಂಗ್ ನಿವಾಸದಲ್ಲಲ್ಲ, ಬದಲಿಗೆ ಲೀ ಮೆರಿಡಿಯನ್ ಹೊಟೇಲ್‌ನಲ್ಲಿ. ಹಣ ನೀಡಿದ್ದು ಅಮರ್ ಸಿಂಗ್ ಅಲ್ಲ, ಸರಕಾರವನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷದ ಸಂಸದ ಮತ್ತು ಪಕ್ಷದಲ್ಲಿನ ಪ್ರಭಾವಿ ನಾಯಕ ಅಹ್ಮದ್ ಪಟೇಲ್ ಎಂದು ಜೇಠ್ಮಲಾನಿ ವಾದಿಸಿದರು.

ಪಕ್ಷದ ಪರವಾಗಿ ಇತರೆ ಪಕ್ಷದ ಸಂಸದರ ಮೇಲೆ ಪ್ರಭಾವ ಬೀರಿರುವ ಅಹ್ಮದ್ ಪಟೇಲ್ ಮತ ಲಂಚ ನೀಡಿದವರಾಗಿದ್ದಾರೆ ಎಂದು ಅವರು ವಾದಿಸಿದರು.

ಅನಾರೋಗ್ಯದಿಂದ ಬಳಲುತ್ತಿರುವ ಅಮರ್ ಸಿಂಗ್ ವಿರುದ್ಧ ಪ್ರಕರಣದಲ್ಲಿ ಯಾವುದೇ ಸಾಂದರ್ಭಿಕ ಸಾಕ್ಷಿಗಳಿಲ್ಲ ಹಾಗಾಗಿ ಅವರ ಮಧ್ಯಾಂತರ ಜಾಮೀನನ್ನು ವಿಸ್ತರಿಸಬೇಕು ಎಂದು ಅವರು ಕೋರ್ಟ್‌ಗೆ ಮನವಿ ಮಾಡಿದರು.

ಅಮರ್ ಸಿಂಗ್ ಅವರ ಮಧ್ಯಂತರ ಜಾಮೀನು ಅವಧಿಯನ್ನು ಸೆ. 27ರವರೆಗೆ ವಿಸ್ತರಿಸಲಾಗಿದೆ. ಮತ್ತೊಬ್ಬ ಆರೋಪಿ ಸುಧೀಂದ್ರ ಕುಲಕರ್ಣಿಗೆ ಸೆ. 27ರೊಳಗೆ ತಪ್ಪದೆ ನ್ಯಾಯಾಲಯಕ್ಕೆ ಹಾಜರಾಗುವಂತೆ ವಿಶೇಷ ನ್ಯಾಯಾಧೀಶೆ ಸಂಗೀತಾ ದಿಂಗ್ರಾ ಸೂಚಿಸಿದ್ದಾರೆ.

English summary
Rajya Sabha MP Amar Singh's counsel Ram Jethmalani has named Congress leader Ahmed Patel in cash for vote 2008 case during the hearing in Delhi court on (Sept.19) Ahmed Patel is political secretary to Congress President and Leader Sonia Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X