ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಹ್ಯಕರ ಸೆಕ್ಸ್ ಬೇಡಿಕೆ, ಹೆಂಡತಿಯಿಂದ ಗಂಡನ ಹತ್ಯೆ

By Prasad
|
Google Oneindia Kannada News

Wife murders husband
ಬೇತುಲ್(ಮ.ಪ್ರ.), ಸೆ. 19 : ಮೊಬೈಲಿನಲ್ಲಿ ಅಸಹ್ಯಕರ ಲೈಂಗಿಕ ಕ್ರಿಯೆಗಳ ಕ್ಲಿಪಿಂಗ್ ತುಂಬಿಸಿಟ್ಟುಕೊಂಡು ಅದೇ ರೀತಿ ಸುಖ ನೀಡುವಂತೆ ಪೀಡಿಸುತ್ತಿದ್ದ ಗಂಡನನ್ನು ಹೆಂಡತಿಯೇ ಕಲ್ಲಿನಿಂದ ಚಚ್ಚಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಪ್ರೇಮನಗರ ನಿವಾಸಿಯಾಗಿರುವ ಅನಿತಾ (30) ತನ್ನ ಗಂಡ ರಾಮಚರಣನನ್ನು ಭಾನುವಾರ ರಾತ್ರಿ ಕೊಂದನಂತರ ತಾನೇ ಸ್ವತಃ ಪಥಖೇಡ ಪೊಲೀಸ್ ಸ್ಟೇಷನ್ನಿಗೆ ಹೋಗಿ ಶರಣಾಗಿದ್ದಾಳೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.

ಅಸಹ್ಯಕರವಾಗಿ ಲೈಂಗಿಕ ಕ್ರಿಯೆಗೆ ಪೀಡಿಸುತ್ತಿದ್ದುದು ಮಾತ್ರವಲ್ಲ ಅದನ್ನು ನಿರಾಕರಿಸಿದಾಗ ಸಿಕ್ಕಾಪಟ್ಟೆ ಹೊಡೆಯುತ್ತಿದ್ದ ಎಂದು ಅನಿತಾ ಪೊಲೀಸರಿಗೆ ತಿಳಿಸಿದ್ದಾಳೆ. ಭಾನುವಾರ ಕೂಡ ಇಬ್ಬರ ನಡುವೆ ಜಗಳ ನಡೆದಿದೆ. ಆತ ಆಕೆಯನ್ನು ಹೊಡೆಯಲು ತೆಗೆದುಕೊಂಡಿದ್ದ ಕಲ್ಲನ್ನು ಕಿತ್ತುಕೊಂಡು ತಲೆಗೆ ಏಟು ಹಾಕಿದ್ದಾಳೆ.

ಹೆಂಡತಿ ಹೊಡೆದ ಹೊಡೆತಕ್ಕೆ ರಾಮಚರಣ ಸ್ಥಳದಲ್ಲಿಯೇ ಹತನಾಗಿದ್ದಾನೆ. ನಂತರ ಇಬ್ಬರು ಚಿಕ್ಕಮಕ್ಕಳೊಂದಿಗೆ ಪೊಲೀಸರಿಗೆ ಹೋಗಿ ಶರಣಾಗಿದ್ದಾಳೆ ಅನಿತಾ. ಆಕೆಯನ್ನು ಬಂಧಿಸಿರುವ ಪೊಲೀಸರು ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
A middle aged woman murders her husband for demanding unnatural sex. The incident has happened in Madhya Pradesh. Man had some kinky video clipping and would ask wife to do sexual act in the same way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X