ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಡೂಡ್ಲ್ ನಲ್ಲಿ ಕಾಮಿಕ್ಸ್ ಅಂಕಲ್ ಪೈ ಚಿತ್ರ

By Mahesh
|
Google Oneindia Kannada News

Google pays tribute to Ananth Pai
ಬೆಂಗಳೂರು, ಸೆ.17: ಅಮರ ಚಿತ್ರಕಥಾ ಸರಣಿಯ ಮೂಲಕ ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಅನಂತ್ ಪೈ ಅವರ ಹುಟ್ಟುಹಬ್ಬದ ಅಂಗವಾಗಿ ಗೂಗಲ್ ತನ್ನ ಡೂಡ್ಲ್ ನಲ್ಲಿ ಪೈ ಅವರ ಚಿತ್ರವನ್ನು ಬಳಸಿಕೊಂಡು ಅವರಿಗೆ ಗೌರವ ಸೂಚಿಸಿದೆ.

ಕಾರ್ಕಳದಲ್ಲಿ ಸೆ.17, 1929 ರಂದು ಹುಟ್ಟುದ ಅನಂತ್ ಪೈ ಅವರು ಅಮರ ಚಿತ್ರಕಥಾ ಹಾಗೂ ಟಿಂಕಲ್ ಕಾಮಿಕ್ಸ್ ಮೂಲಕ ಮನೆ ಮಾತಾದವರು.

ಭಾರತದಲ್ಲಿ ಕಾಮಿಕ್ಸ್ ಕ್ರಾಂತಿಗೆ ಕಾರಣರಾದ ಅಂಕಲ್ ಪೈ ಅವರ ಅಮರ್ ಚಿತ್ರಕಥಾ ಸರಣಿಯಲ್ಲಿ ಭಾರತೀಯ ಸಂಸ್ಕೃತಿ, ಇತಿಹಾಸ, ಸ್ಥಳ ಮಹಾತ್ಮೆ, ಚಕ್ರವರ್ತಿಗಳ ಪರಂಪರೆ ಅಷ್ಟೇ ಅಲ್ಲದೆ, ಶೈಕ್ಷಣಿಕ ಬೋಧನೆ, ಮಕ್ಕಳಿಗೆ ಮನರಂಜನೆ ಕೂಡಾ ಇರುತ್ತಿತ್ತು.

ಫೆ.24, 2011ರಲ್ಲಿ ಮೃತರಾದ ಅನಂತ್ ಪೈ ಅವರಿಗೆ ಕಾಮಿಕ್ಸ್ ಸಮಾವೇಶದಲ್ಲಿ ಲೈಫ್ ಟೈಮ್ ಪ್ರಶಸ್ತಿ ನೀಡಲಾಗಿದೆ. ಕಾಮಿಕ್ಸ್ ಅಲ್ಲದೆ ಅನೇಕ ಯುವ ಮನಸ್ಸುಗಳನ್ನು ತಿದ್ದುತ್ತಾ ಅವರ ವ್ಯಕ್ತಿತ್ವ ವಿಕಾಸಕ್ಕೂ ಪೈ ಕಾರಣರಾಗಿದ್ದರು ಎಂದು ಗೂಗಲ್ ಹೊಗಳಿದೆ.

ಭಾರತ ಸೇರಿದಂತೆ ವಿಶ್ವದ ಅನೇಕ ವಿದ್ಯಮಾನಗಳು, ಐತಿಹಾಸಿಕ ದಿನಗಳು, ಹಬ್ಬ ಹರಿದಿನಗಳು, ಆಚರಣೆಗಳ ಸಂದರ್ಭದಲ್ಲಿ ಗೂಗಲ್ ತನ್ನ ಡೂಡ್ಲ್ ರೇಖಾಚಿತ್ರದ ಮೂಲಕ ಸಾಧಕರನ್ನು ಸ್ಮರಿಸುವ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಬಂದಿದೆ.

1998ರಿಂದ ಸುಮಾರು 900ಕ್ಕೂ ಹೆಚ್ಚು ಡೂಡ್ಲ್ ಗಳನ್ನು ರಚಿಸಿ ಪ್ರದರ್ಶಿಸಲಾಗಿದೆ. 2011ರಲ್ಲಿ 150 ಡೂಡ್ಲ್ ಗಳು ಗೂಗಲ್ ಮುಖ್ಯಪುಟದಲ್ಲಿ ರಾರಾಜಿಸಿದೆ.

English summary
A comic book style doodle featured today(Sept.17) to mark 82nd birth anniversary of Anant Pai creator of Amar Chitra Katha and Tinkle comic books
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X