ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಮೀನು: ಯಡಿಯೂರಪ್ಪ ಬಾಯಿಗೆ ಜಾಮೂನು

By Srinath
|
Google Oneindia Kannada News

yeddyurappa-gets-bail-bhadra-upper-project
ಬೆಂಗಳೂರು, ಸೆ.15: ಭದ್ರಾ ಮೇಲ್ದಂಡೆ ಯೋಜನೆ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೈಕೋರ್ಟ್ ಜಾಮೀನು ನೀಡಿದೆ. ಯಡಿಯೂರಪ್ಪ ಅವರು ಪ್ರಕರಣದ ಸಂಬಂಧ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.

ಜೆಡಿಎಸ್ ನೇತಾರ ವೈ ಎಸ್ ವಿ ದತ್ತಾ ಅವರು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಲೋಕಾಯುಕ್ತ ಕೋರ್ಟಿನಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಲೋಕಾಯುಕ್ತ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದ್ದರಿಂದ ಬಂಧನದ ಭೀತಿಗೊಳಗಾಗಿದ್ದ ಯಡಿಯೂರಪ್ಪ ಅವರು ನಿರೀಕ್ಷಣ ಜಾಮೀನು ಕೋರಿದ್ದರು.

ತನಿಖಾಧಿಕಾರಿ ಮುಂದೆ 10 ದಿನಗಳೊಳಗೆ ಹಾಜರಾಗಬೇಕು. ದೇಶಬಿಟ್ಟು ಹೋಗಬಾರದು ಎಂದು ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಒಂದು ಲಕ್ಷ ರುಪಾಯಿ ಬಾಂಡ್ ಅನ್ನೂ ಸಲ್ಲಿಸಲಬೇಕು ಎಂದು ಸೂಚಿಸಲಾಗಿದೆ. ಗಮನಾರ್ಹ ಸಂಗತಿಯೆಂದರೆ ಯಡಿಯೂರಪ್ಪಗೆ ಪ್ರಕರಣದಲ್ಲಿ ಸಮನ್ಸ್ ಜಾರಿಗೊಳಿಸಿದ್ದು ಸರಿಯಲ್ಲ ಎಂದೂ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

English summary
Former chief minister B.S. Yeddyurappa gets bail in High Court in Bhadra Upper Project scam filed by YSV Datta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X