ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹಿಣಿಯ ಮಾನಭಂಗ ಯತ್ನ: ಪೇದೆಯ ಬಂಧನ

By Srinath
|
Google Oneindia Kannada News

constable-try-to-molest-house-wife-arrested
ಹೈದರಾಬಾದ್, ಸೆ. 15: ಗೃಹಿಣಿಯ ಮಾನಭಂಗಕ್ಕೆ ಯತ್ನಿಸಿದ ಷಮೀರ್ ಪೇಟೆಯ ಹರಿಕೃಷ್ಣ ಎಂಬ ಪೊಲೀಸ್ ಪೇದೆಯನ್ನು ಬುಧವಾರ ಬಂಧಿಸಲಾಗಿದೆ.

ಇಂದ್ರಮ್ಮ ಕಾಲೊನಿಯಲ್ಲಿ ಶಿವಾರೆಡ್ಡಿ ಎಂಬುವವರ ಮನೆಗೆ ಸ್ನೇಹಿತ ರಾಜು ಎಂಬವನ ಜತೆ ಪೇದೆ ಹರಿಕೃಷ್ಣ ಮಂಗಳವಾರ ರಾತ್ರಿ ತೆರಳಿದ್ದ. ಬಾಗಿಲು ಬಡಿಯುತ್ತಿದ್ದಂತೆ ಮನೆಯೊಳಗಿದ್ದ ಮಹಿಳೆ ಬಾಗಿಲು ತೆರೆದಿದ್ದಾರೆ. ತಕ್ಷಣವೇ ಆ ಮಹಿಳೆಯನ್ನು ಲಾಕ್ ಮಾಡಿಕೊಂಡ ಪೇದೆ, ಅವರನ್ನು ದರದರನೆ ಹೊರಗೆಳೆದಿದ್ದಾನೆ.

ಮಹಿಳೆ ಜೋರಾಗಿ ಕಿರುಚಿಕೊಂಡಾಗ ಆಕೆಯ ಗಂಡ ಮತ್ತು ನೆರೆ ಮನೆಯವರು ಬರುತ್ತಿದ್ದಂತೆ ಇಬ್ಬರೂ ಪಲಾಯನ ಮಾಡಿದ್ದಾರೆ. ಬಳಿಕ ಮಹಿಳೆಯು ತನ್ನ ಗಂಡನ ಜತೆಗೂಡಿ ಠಾಣೆಗೆ ತೆರಳಿ, ದೂರು ನೀಡಿದ್ದಾರೆ. ದೂರಿನನ್ವಯ ಪ್ರಾಥಮಿಕ ವಿಚಾರಣೆ ನಡೆಸಿದ ಪೊಲೀಸರು, ದೂರು ದಾಖಲಿಸಿಕೊಂಡು ಪೇದೆಯನ್ನು ಬಂಧಿಸಿದ್ದಾರೆ.

English summary
A police constable (Hari Krishna ) attached to Shamirpet police station was arrested on Wednesday for allegedly trying to molest a housewife in Indramma Colony, Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X