ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಶಾಸಕ ಕರುಣಾಕರ ರೆಡ್ಡಿ ಬೆನ್ನತ್ತಿದ ಸಿಬಿಐ

By Rohini Bellary
|
Google Oneindia Kannada News

CBI notice to Karunakara Reddy
ಬಳ್ಳಾರಿ, ಸೆ. 15 : ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರ ಬಂಧನದ ಹಿನ್ನೆಲೆಯಲ್ಲಿ ಅವರ ಸಹೋದರ ಮಾಜಿ ಸಚಿವ ಜಿ. ಕರುಣಾಕರರೆಡ್ಡಿ ಸೇರಿ ಒಟ್ಟು 15 ಜನರಿಗೆ ಸೆಪ್ಟೆಂಬರ್ 16ರ ಶುಕ್ರವಾರ ಹೈದರಾಬಾದ್‌ಗೆ ಆಗಮಿಸಿ, ವಿಚಾರಣೆಗೆ ಒಳಗಾಗಬೇಕು ಎಂದು ಸಿಬಿಐ ನೋಟೀಸ್ ಜಾರಿ ಮಾಡಿದೆ.

ಈ ಕುರಿತು ಮೂಲಗಳು ಮಾಹಿತಿ ಖಚಿತಪಡಿಸಿದ್ದು, ಸಿಬಿಐನ ಇನ್ಸ್‌ಪೆಕ್ಟರ್ ಸೀತಾರಾಮು ಅವರು ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಬಳ್ಳಾರಿ ನಗರ ನಿವಾಸಿಗಳಾದ 15 ಜನರಿಗೆ ನೋಟೀಸ್ ಜಾರಿ ಮಾಡಿದ್ದಾರೆ.

ಅಕ್ರಮ - ಅನಧಿಕೃತ ಗಣಿಗಾರಿಕೆಯ ವಿರುದ್ಧ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಟಪಾಲ್ ಗಣೇಶ್ ಮತ್ತು ಟಪಾಲ್ ಏಕಾಂಬರಂ, ಎಂಬಿಟಿ ಗಣಿ ಕಂಪನಿ ಸೇರಿ ಒಟ್ಟು 15 ಜನರಿಗೆ ನೋಟೀಸ್‌ಗಳು ಜಾರಿಯಾಗಿವೆ.

English summary
Central Bureau of Investigation Hyderabad branch has issued notice to 15 people including Karunakara Reddy, Tapal Ganesh to appear for inquiry in Hyderabad related to illegal mining in Karnataka and Janardhana Reddy's arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X