ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀರಾಮುಲು ಬಂಧನಕ್ಕೆ ಸಿದ್ದರಾಮಯ್ಯ ಅಗ್ರಹ

By Mahesh
|
Google Oneindia Kannada News

Siddaramaiah
ಬೆಂಗಳೂರು, ಸೆ.14: ಪ್ರಭಾವಿ ವ್ಯಕ್ತಿಗಳಾಗಿರುವ ಕರುಣಾಕರ ರೆಡ್ಡಿ ಹಾಗೂ ಶ್ರೀರಾಮುಲು ಅವರನ್ನು ಕೂಡಲೇ ಸಿಬಿಐ ಬಂಧಿಸಬೇಕು. ಇಲ್ಲದಿದ್ದರೆ ರೆಡ್ಡಿ ಸಾಮ್ರಾಜ್ಯದ ಅಮೂಲ್ಯ ಸಾಕ್ಷಿ ದಾಖಲೆಗಳು ಸಿಬಿಐ ಕೈ ಸೇರುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಓಎಂಸಿ ಅಕ್ರಮ ಗಣಿಗಾರಿಕೆ ಆಂಧ್ರ ಗಡಿಯಲ್ಲಿಯಾದರೂ ಅದರ ಬಿಸಿ ತಟ್ಟುವುದು ಕರ್ನಾಟಕಕ್ಕೆ, ಬಳ್ಳಾರಿಗೆನೇ. ಆದಷ್ಟು ಬೇಗ ರೆಡ್ಡಿ ಬೆಂಬಲಿಗರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸದಿದ್ದರೆ ಸತ್ಯವನ್ನು ಮುಚ್ಚಿಹಾಕಿದ್ದಂತಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಶ್ರೀರಾಮುಲು ರಾಜೀನಾಮೆ ನೀಡಿದರೂ ಅದನ್ನು ಅಂಗೀಕರಿಸದೆ ಸುಮ್ಮನಿರುವ ಸಭಾಪತಿ ಕೆ.ಜಿ. ಬೋಪಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮಾನ ಉಳಿಸಿಕೊಳ್ಳಲಿ. ಬಿಜೆಪಿಯಲ್ಲಿ ಅಡಿಯಿಂದ ಮುಡಿಯವರೆಗೂ ಭ್ರಷ್ಟರೇ ತುಂಬಿದ್ದಾರೆ ಎಂದು ಸಿದ್ದು ತಮ್ಮ ಎಂದಿನ ಸ್ಮೈಲ್ ಕೊಟ್ಟರು.

English summary
Karnataka congress leader Siddaramaiah has demanded that Sri Ramulu and Karunakara Reddy should be arrest else CBI will loose all important documnets on Bellary Reddy's illegal mining. Janardhana Reddy aides are busy in hiding the documents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X