ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಟ್ಯಾಂಕ್ ಇಂದೇ ತುಂಬಿಸಿಟ್ಟುಕೊಳ್ಳಿ!

By Prasad
|
Google Oneindia Kannada News

Petrol prices may rise again
ನವದೆಹಲಿ, ಸೆ. 14 : ಪೆಟ್ರೋಲ್, ವಿದ್ಯುತ್, ಹಾಲು, ನೀರು, ಆಹಾರಧಾನ್ಯ, ಬಸ್ ದರ ಏರಿಕೆಯಿಂದ ಕಂಗೆಟ್ಟಿರುವ ಮಧ್ಯಮವರ್ಗದವರು ಮತ್ತು ಕೆಳಮಧ್ಯಮವರ್ಗದವರು ಮತ್ತೊಂದು 'ಶಾಕ್' ಟ್ರೀಟ್ ಮೆಂಟಿಗೆ ಸಿದ್ಧವಾಗಬೇಕಾಗಿದೆ. ತೈಲ ಕಂಪನಿಗಳು ಇನ್ನೊಂದು ಸುತ್ತಿನ ದರ ಏರಿಕೆಗೆ ಸಿದ್ಧತೆ ನಡೆಸಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಸ್ಥಿರವಾಗಿದ್ದರೂ ಡಾಲರ್ ಎದಿರು ರುಪಾಯಿ ಮೌಲ್ಯದಲ್ಲಿ ಕುಸಿತ ಕಂಡುಬಂದಿರುವುದರಿಂದ ಬಹುತೇಕ ತೈಲ ಮಾರುಕಟ್ಟೆ ಕಂಪನಿಗಳು ನಷ್ಟ ಅನುಭವಿಸುತ್ತಿವೆ ಎಂದು ಹೇಳಲಾಗುತ್ತಿದೆ. ಈ ನಷ್ಟದ ಹೊರೆ ಜನಸಾಮಾನ್ಯರ ಮೇಲೆ ಆಗಲಿದೆ.

ರುಪಾಯಿ ತನ್ನ ಮೌಲ್ಯ ಕಳೆದುಕೊಂಡಿದ್ದರಿಂದ ಆಮದು ಮಾಡಿಕೊಂಡ ತೈಲದ ಬೆಲೆ ಏರಿಕೆಯಾಗಿ, ಕಳೆದ ತಿಂಗಳ ದ್ವಿತೀಯಾರ್ಧದಲ್ಲಿ ಪ್ರತಿ ಲೀಟರಿಗೆ 41 ಪೈಸೆಯಷ್ಟು ಮಾತ್ರ ಅನುಭವಿಸುತ್ತಿದ್ದ ಕಂಪನಿಗಳ ನಷ್ಟ ಈ ತಿಂಗಳು ಪ್ರತಿ ಲೀಟರಿಗೆ 3.40 ರು.ನಷ್ಟಾಗಿದೆ.

ಮೇ ತಿಂಗಳಲ್ಲಿ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರಿಗೆ 5 ರು.ನಷ್ಟು ಏರಿಸಲಾಗಿತ್ತು. ಕಚ್ಚಾ ತೈಲದ ಬೆಲೆ ಏರಿಳಿತ ಕಾಣುತ್ತಿದ್ದಂತೆ ಪೆಟ್ರೋಲ್ ಬೆಲೆಯನ್ನು ಆಗಾಗ ಕಂಪನಿಗಳು ಏರಿಸುತ್ತಲೇ ಇವೆ. ಇದನ್ನು ಚರ್ಚಿಸಲೆಂದೆ ಗುರುವಾರ, ಸೆ.15ರಂದು ಕೇಂದ್ರ ಮಂತ್ರಿಗಳ ಸಭೆಯನ್ನು ಕರೆಯಲಾಗಿದೆ.

ಸಭೆಯ ನಂತರ ಪೆಟ್ರೋಲ್ ಬೆಲೆ ಏರುಮುಖವಾಗುವುದು ನಿಚ್ಚಳವಾಗಿದೆ. ಆದರೆ, ಜನಸಾಮಾನ್ಯರಿಗೆ ಹೊರೆಯಾಗದಂತೆ ಎಷ್ಟು ಏರಿಸಲಾಗುತ್ತದೆ ಎಂಬುದು ಸಭೆಯ ನಂತರ ಗುರುವಾರ ತಿಳಿಯಲಿದೆ. ಸೋ, ಮತ್ತೊಂದು ಬೆಲೆ ಏರಿಕೆಯ ದಿನಗಳಿಗೆ ಜನಸಾಮಾನ್ಯರು ಈಗಿನಿಂದಲೇ ಮಾನಸಿಕವಾಗಿ ಸಿದ್ಧರಾಗುವುದು ಒಳಿತು.

English summary
Yet another pinch in the pockets of a common man, as the state-owned oil companies are expected to announce another hike in petrol prices. The decision to raise prices might be taken on account of firm crude prices and weak domestic currency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X