ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಟೆಕ್ ಸಿಟಿ ಬೆಂಗಳೂರಲ್ಲಿ ಅವ್ರ ಸಂಖ್ಯೆ 24,000

By Mahesh
|
Google Oneindia Kannada News

Women Development Corporation to help Prostitutes
ಬೆಂಗಳೂರು, ಸೆ.13: ಬೇರೆಯವರಿಗೆ ಸುಖ ನೀಡುತ್ತಾ, ತಮ್ಮ ಬದುಕನ್ನು ಕತ್ತಲೆಯಲ್ಲೇ ಕಳೆಯುವ ನಿತ್ಯ ಸುಮಂಗಲಿಯರಿಗೆ ಸರ್ಕಾರ ಪುನರ್ವಸತಿ ಕಲ್ಪಿಸಿ, ಮುಖ್ಯ ವಾಹಿನಿಗೆ ಕರೆ ತರುವ ಮಾತು, ಮಾತಾಗೇ ಉಳಿದಿದೆ.

ಆದರೆ, ವೇಶ್ಯೆಯರಿಗೆ ವಿವಿಧ ತರಬೇತಿ ನೀಡಿ, ಉದ್ಯೋಗವಕಾಶ ಕಲ್ಪಿಸಿ ಸಮಾಜದಲ್ಲಿ ತಲೆ ಎತ್ತಿಕೊಂಡು ಬಾಳುವಂಥ ಪರಿಸ್ಥಿತಿ ನಿರ್ಮಾಣ ಮಾಡಲು ಮಹಿಳಾ ಅಭಿವೃದ್ಧಿ ನಿಗಮ ಸದಾ ಸಿದ್ಧವಿದೆ.

ನೊಂದ ಮಹಿಳೆಯರು ಯಾವುದೇ ಮುಜುಗರ ಭಯವಿಲ್ಲದೆ ನಿಗಮವನ್ನು ಸಂಪರ್ಕಿಸಬಹುದು ಎಂದು ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್ ಅವರು ಪ್ರಮುಖ ದಿನಪತ್ರಿಕೆಗೆ ತಿಳಿಸಿದ್ದಾರೆ.

ಸಂಖ್ಯೆ ಇಷ್ಟಿದ್ದರೂ ನೋವಿಗೆ ಲೆಕ್ಕವೆಲ್ಲಿದೆ?: ಬೆಂಗಳೂರು ನಗರದಲ್ಲಿಯೇ 24,000 ವೇಶ್ಯೆಯರಿದ್ದಾರೆ. ರಾಜ್ಯಾದ್ಯಂತ ಸುಮಾರು 77,000 ಲೆಕ್ಕಕ್ಕೆ ಸಿಗುತ್ತಾರೆ ಎಂದು ಸ್ವಯಂ ಸೇವಾ ಸಂಘದ ಸಮೀಕ್ಷೆ ಹೇಳುತ್ತದೆ. ಆದರೆ, ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನಿತ್ಯ ನೋವು ಅನುಭವಿಸುತ್ತಿರುವವರಲ್ಲಿ ಅನೇಕರು ಎಚ್ ಐವಿ ಪೀಡಿತರೂ ಇದ್ದಾರೆ.

ಗಂಡನಿಂದ ದೂರಾದವರು, ವಿಧವೆಯರು, ವಿಚ್ಛೇಧನ ಪಡೆದವರು, ಮನೆ ಬಿಟ್ಟು ಬಂದವರು, ಅನೈತಿಕ ಸಂಬಂಧದ ಕೂಪದಲ್ಲಿ ಬಿದ್ದವರು ಸೇರಿದಂತೆ ಗಂಡ, ಮಕ್ಕಳು ಇದ್ದೂ ವೇಶ್ಯಾವೃತ್ತಿ ನಡೆಸುತ್ತಿರುವವರು ಈ ಗುಂಪಿನಲ್ಲಿ ಸೇರಿದ್ದಾರೆ. ಇವರಲ್ಲಿ ಹಲವರು ಮಕ್ಕಳೊಂದಿಗೆ ಇದ್ದರೂ, ಅವರ ಭವಿಷ್ಯ ರೂಪಿಸಲೆಂದೇ ಈ ವೃತ್ತಿಯಲ್ಲಿ ಇನ್ನೂ ಮುಂದುವರೆದಿದ್ದಾರೆ.

ಕೆಲವರ ಮಕ್ಕಳು ಇನ್ಫೋಸಿಸ್‌, ವಿಪ್ರೋ, ಎಚ್‌ಪಿಯಂತಹ ಪ್ರತಿಷ್ಠಿತ ಸಾಫ್ಟ್ವೇರ್‌ ಕಂಪೆನಿಗಳಲ್ಲೂ ದುಡಿಯುತ್ತಿದ್ದಾರೆ. ನಿತ್ಯ ನರಕ ಅನುಭವಿಸುತ್ತಾ ಮಕ್ಕಳ ಐಷಾರಾಮಿ ಬದುಕಿಗೆ ಈ ತಾಯಂದರು ತಮ್ಮ ಬದುಕು ಸವೆಸುತ್ತಿದ್ದಾರೆ. ಸರ್ಕಾರದ ಸೌಲಭ್ಯಕ್ಕೆ ಕಾಯದೆ ನಿಗಮದ ಬಾಗಿಲು ತಟ್ಟಿ ತಮ್ಮ ಬಾಳನ್ನು ಹಸನಾಗಿಸಿಕೊಳ್ಳಲಿ ಎಂದು ಸರೋಜಿನಿ ಅವರು ಆಶಯ ವ್ಯಕ್ತಪಡಿಸಿದ್ದಾರೆ.

English summary
Prostitution in Bangalore and whole Karnataka is increased. But Prostitutes are suffering, many have infected with HIV, Women Developement Corporation President Sarojini Bharadwaj extends her helping hand to those who are leading life in dark.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X