ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಆಡ್ ವಿರುದ್ಧ ಮನೆಕೆಲಸದವರ ಸಂಘ

By Mahesh
|
Google Oneindia Kannada News

Protest against Tata Docomo
ಮುಂಬೈ, ಸೆ.12 : ಟಾಟಾ ಡೊಕೊಮೊ ಜಾಹೀರಾತಿನಲ್ಲಿ ಮನೆಕೆಲಸ ಮಾಡುವವರನ್ನು ತುಂಬಾ ಕೀಳು ದೃಷ್ಟಿಯಿಂದ ತೋರಿಸಲಾಗಿದೆ ಎಂದು ಕಿಡಿಕಾರಿರುವ ಮನೆಕೆಲಸಗಾರರ ಸಂಘಟನೆ(Gharkamgar Molkarni Sanghatna), ಈ ಮೂಲಕ ತಮ್ಮನ್ನು ಮತ್ತಷ್ಟು ಹೀನಾಯವಾಗಿ ಕಾಣುವಂತೆ ಪ್ರೇರೇಪಿಸುವಂತಾಗಿದೆ ಎಂದು ಕೆಂಗಣ್ಣು ಬೀರಿದೆ.

ಮನೆಕೆಲಸದಾಕೆಯೊಬ್ಬಳು ಮನೆ ಸ್ವಚ್ಛಗೊಳಿಸುತ್ತಿರುವ ವೇಳೆ ಪತ್ತೆಯಾದ ಯಜಮಾನನ ಮೊಬೈಲ್ ಫೋನನ್ನು ತನ್ನ ರವಿಕೆಯೊಳಗೆ ಬಚ್ಚಿಟ್ಟುಕೊಳ್ಳುತ್ತಾಳೆ. ಸ್ವಚ್ಛ ಕಾರ್ಯ ಮುಗಿಸಿ ಹೊರಹೋಗುವ ವೇಳೆ ತಟ್ಟನೆ ಮೊಬೈಲ್ ರಿಂಗ್ ಆಗುತ್ತದೆ. ಇದೇ ವೇಳೆ ಮನೆಕೆಲಸದಾಕೆ ಯಜಮಾನನ ಕೈಗೆ ಸಿಕ್ಕಿಬೀಳುತ್ತಾಳೆ.[ಜಾಹೀರಾತಿನ ಒಂದು ದೃಶ್ಯ ನೋಡಿ]

ಇದರೊಂದಿಗೆ, ನಮ್ಮ ಟಾಟಾ ಡೊಕೊಮೊ ನೆಟ್‌ವರ್ಕ್‌ನಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂಬ ಅರ್ಥದ ಘೋಷಣೆಯೊಂದಿಗೆ ಜಾಹೀರಾತು ಮುಕ್ತಾಯವಾಗುತ್ತದೆ. ಆದರೆ, ಈ ಜಾಹೀರಾತು ಮನೆಕೆಲಸ ಮಾಡುತ್ತಿರುವ ಮಹಿಳೆಯರನ್ನು ತುಂಬಾ ಹೀನಾಯ ಸ್ಥಿತಿಯಲ್ಲಿ ನೋಡಲು ಪ್ರಚೋದಿಸುತ್ತದೆ ಎಂದು ಸಂಘಟನೆಯ ಸಂಚಾಲಕಿ ಏಕನಾಥ ಮಾನೆ ಅವರು ಹೇಳಿದ್ದಾರೆ.

ಈ ಕುರಿತು ಎಲ್ಲಾ ಸಂಘಟನೆಗಳು ಒಟ್ಟು ಸೇರಿ ಸೆಂಟ್ರಲ್ ಮುಂಬೈನ ಲಾಲ್‌ಬಾಗ್‌ನಲ್ಲಿರುವ ಟಾಟಾ ಡೊಕೊಮೊ ಕಂಪನಿಯ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಕ್ಷಮಾಪಣೆಗೆ ಒತ್ತಾಯಿಸುವುದಾಗಿ ಹೇಳಿದ್ದಾರೆ.

ಎಲ್ಲಾ ಮನೆಕೆಲಸದವರೂ ಕಳ್ಳರೆಂಬಂತೆ ಡೊಕೊಮೊ ಜಾಹೀರಾತು ಬಿಂಬಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಟಾಟಾ ಡೊಕೊಮೊ ಕಂಪನಿ, ಕೂಡಲೇ ಆ ಜಾಹೀರಾತನ್ನು ಹಿಂತೆಗೆದುಕೊಂಡು, ಯಾರಿಗೂ ಅವಮಾನವಾಗದ ರೀತಿಯಲ್ಲಿ ಬೇರೆಯದೇ ರೀತಿಯ ಜಾಹೀರಾತು ಚಿತ್ರೀಕರಿಸುವುದಾಗಿ ಹೇಳಿಕೊಂಡಿದೆ. ಆದರೆ, ಯಾವುದೇ ಪ್ರಗತಿಯಾಗಿಲ್ಲ ಎಂದು ಸಂಘಟನೆಗಳು ತಿಳಿಸಿವೆ.

English summary
The Gharkamgar Molkarni Sanghatna, an association of domestic servants, has objected to a TV ad of Tata DoCoMo, saying it depicted their profession in a bad light.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X