ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತೀಯ ಗಲಭೆ ಮಸೂದೆ ಮೊಯ್ಲಿ ಸಮರ್ಥನೆ

By Mahesh
|
Google Oneindia Kannada News

Veerappa Moily defends Communal Riots Bill
ಮಂಗಳೂರು, ಸೆ.12: ರಾಜ್ಯ ಸರಕಾರ ಗಳಿಂದ ಅಲ್ಪಸಂಖ್ಯಾತರ ಮೇಲಾಗುತ್ತಿರುವ ಅನ್ಯಾಯವನ್ನು ತಡೆಗಟ್ಟುವ ಉದ್ದೇಶದಿಂದ, ಕೇಂದ್ರ ಸರ್ಕಾರ ಕೋಮು ಹಿಂಸೆ ತಡೆ ಮಸೂದೆಯನ್ನು ಜಾರಿಗೆ ತರಲು ಮುಂದಾಗಿದೆ ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ವೀರಪ್ಪ ಮೊಯ್ಲಿ ಪ್ರತಿಪಾದಿಸಿದ್ದಾರೆ.

ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡ, ಕೆಲವು ದಿನಗಳ ಹಿಂದೆ ಮುಂಬೈಯಲ್ಲಿ ನಡೆದ ಗಲಭೆ, ಕರ್ನಾಟಕದಲ್ಲಿ ನಡೆದ ಚರ್ಚ್ ದಾಳಿ ಮುಂತಾದ ಪ್ರಕರಣಗಳಲ್ಲಿ ಅಲ್ಲಿನ ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಂಡಿರಲಿಲ್ಲ.

ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ಮುಖ್ಯಮಂತ್ರಿ ಸದಾನಂದ ಗೌಡರ ಮಾತಲ್ಲಿ ಅರ್ಥವಿಲ್ಲ ಎಂದು ಮೊಯ್ಲಿ ಹೇಳಿದ್ದಾರೆ.

ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ನಿಯಂತ್ರಿಸಲು ವಜಾ ಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಲು ಸಂವಿಧಾನದಲ್ಲಿ ಕೇಂದ್ರ ಸರಕಾರಕ್ಕೆ ಅವಕಾಶ ಇದೆಯಾದರೂ ಅದು ಸುಲಭವಲ್ಲ. ಇದರಿಂದಾಗಿ ಗಲಭೆಗಳು ವಿಕೋಪಕ್ಕೆ ತಿರುಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಮಸೂದೆ ಅಗತ್ಯವಿದೆ ಎಂದು ಮೊಯ್ಲಿ ಸಮರ್ಥನೆ ನೀಡಿದ್ದಾರೆ.

ರೆಡ್ಡಿ ಬಂಧನದಲ್ಲಿ ಕಾಂಗ್ರೆಸ್ ಕೈವಾಡ ಇದೆಯೆಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮೊಯ್ಲಿ, ಸಿಬಿಐ ಸ್ವಾಯತ್ತ ಸಂಸ್ಥೆ.

ಸುರೇಶ್ ಕಲ್ಮಾಡಿ, ಎ.ರಾಜಾರಂಥವರನ್ನೇ ಸಿಬಿಐ ಬಂಧಿಸಿದೆ. ಅದೇ ರೀತಿ ರೆಡ್ಡಿ ಗಳ ಮೇಲೆಯೂ ಕ್ರಮ ಕೈಗೊಂಡಿದೆ. ಇದು ನ್ಯಾಯವಾದಿಯಾಗಿರುವ ಸದಾನಂದ ಗೌಡರಿಗೆ ಗೊತ್ತಿರಬೇಕಿತ್ತು ಎಂದು ವ್ಯಂಗ್ಯವಾಡಿದರು.

English summary
Union corporate affairs minister M Veerappa Moily has defended veerappa moily on communal riots(violence) act. and said Karnataka CM Sadananda Gowda should accept it without opposing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X